ಲಂಡನ್‌ನ ಟ್ರಫಲ್ಗಾರ್ ಚೌಕದಲ್ಲಿ ವಿನೂತನ ಕಲೆಯೊಂದರ ಕೆತ್ತನೆಯೊಂದು ಜನರ ಗಮನ ಸೆಳೆಯುತ್ತಿದೆ. ಈ ಕಲಾಕೃತಿ ಯಾರೋ ಫೇಮಸ್ ವ್ಯಕ್ತಿಯ ಪ್ರತಿಮೆಯೂ ಅಲ್ಲ.
ಮೇಲೆ ಚೆರ‍್ರಿ ಹಣ್ಣು ಇರುವ ಐಸ್ ಕ್ರೀಂನ ಕಲಾಕೃತಿ ಇದಾಗಿದೆ. ‘The End’ ಎಂದು ಕರೆಯಲಾಗುವ ಈ ಕಲಾಕೃತಿಯು 9 ಟನ್ ತೂಕವಿದ್ದು, ಈ ಜನಪ್ರಿಯ ಸ್ಥಳದಲ್ಲಿ ತಲೆಯೆತ್ತಿದೆ. ಹೀತರ್ ಫಿಲಿಪ್ಸನ್ ಹೆಸರಿನ ಶಿಲ್ಪಿ ಈ ಕಲಾಕೃತಿಯ ನಿರ್ಮಾತೃ ಆಗಿದ್ದಾರೆ. ಕ್ರೀಮ್ ಮೇಲೆ ನೊಣವೊಂದು ಕುಳಿತಂತೆ ಮಾಡಲಾಗಿದೆ.
ಮೊದಲು ನಿರ್ಧರಿಸಿದಂತೆ ಈ ಜಾಗದಲ್ಲಿ ವಿಲಿಯಮ್ IV ಅವರ ಪುತ್ಥಳಿ ಪ್ರತಿಷ್ಠಾಪನೆ ಆಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಸದಾ ಪ್ರವಾಸಿಗರಿಂದ ತುಂಬಿರುವ ಲಂಡನ್‌ನ ಈ ಚೌಕವು ಸಾಕಷ್ಟು ಪ್ರತಿಭಟನೆಗಳು ಹಾಗೂ ಚಳವಳಿಗಳ ಹಾಟ್‌ಸ್ಪಾಟ್ ಆಗಿದ್ದು, ಇತಿಹಾಸದ ದಾಖಲೆಗಳಲ್ಲಿ ಅಜರಾಮರವಾಗಿದೆ.