ಕೊರೋನಾ ಹರಡಲು ಬಾವಲಿ ಕಾರಣ ಎಂಬ ಮಾತುಗಳು ಒಂದಷ್ಟು ದಿನಹಬ್ಬಿತ್ತು. ಕೆಲವು ಕಡೆ ಬಾವಲಿಗಳನ್ನು ಜನ ಕೊಂದು ಹಾಕಿದ್ದೂ ಆಯಿತು.
ಇದೇ ವೇಳೆ ಫ್ರಾನ್ಸ್‌ನ ಮ್ಯೂಸಿಯಂವೊಂದರಲ್ಲಿ, ಸಂಶೋಧಕರು ಬಾವಲಿಗಳಿಗೆ ರಾಯಲ್ ಟ್ರೀಟ್ಮೆಂಟ್ ನೀಡುತ್ತಿದ್ದಾರೆ. ಮಗುವಿನಂತೆ ಆಹಾರ ನೀಡಿ ಪೋಷಿಸಲಾಗುತ್ತಿದೆ.
ಮ್ಯೂಸಿಯಂ ನಿರ್ದೇಶಕ ಲಾರೆಂಟ್ ಆರ್ಥರ್ ಮತ್ತು ಅವರ ತಜ್ಞರ ತಂಡ ಬೋರ್ಜಸ್ ಪ್ರದೇಶದಲ್ಲಿನ 1,500ಕ್ಕೂ ಹೆಚ್ಚು ಬಾವಲಿ ವಾಸಸ್ಥಾನ ಗುರುತಿಸಿದೆ ಮತ್ತು ಅದರ ಚಲನವಲನಗಳು ಮತ್ತು ಯೋಗಕ್ಷೇಮದ ಬಗ್ಗೆ ಕೆಲಸ ಮಾಡುತ್ತಿದೆ.
ಜನ ಕೊರೋನಾದಿಂದ ಹೆದರಿದ್ದಾರೆ. ಆದರೆ ಬಾವಲಿಗಳಿಂದ ಕೊರೋನಾ ಹರಡುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.