ನಿರ್ಜೀವ ವಸ್ತುಗಳ ಮೇಲೆ ಹೆಚ್ಚು ಆಕರ್ಷಣೆ ಹೊಂದಿದ್ದ ಮಹಿಳೆ ಬ್ರೀಫ್ಕೇಸ್ ಜೊತೆ ವಿವಾಹವಾದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಆಕೆ ಬ್ರೀಫ್ಕೇಸ್ನ್ನ ತನ್ನ ಮಾರ್ಗದರ್ಶಕ ಎಂದು ನಂಬಿದ್ದಾಳೆ.
ನಿರ್ಜಿವ ವಸ್ತುಗಳ ಮೇಲೆ ಆಕರ್ಷಣೆ ಅಥವಾ ಅವುಗಳ ಜೊತೆ ಲೈಂಗಿಕ ಕ್ರಿಯೆ ನಡೆಸಲು ಆಸಕ್ತಿ ಹೊಂದೋದನ್ನ ಆಬ್ಜೆಕ್ಟೊಫಿಲಿಯಾ ಅಥವಾ ಆಬ್ಜೆಕ್ಟ್ ಸೆಕ್ಸುವ್ಯಾಲಿಟಿ ಎಂದು ಕರೆಯಲಾಗುತ್ತೆ. ಈ ಗುಣವನ್ನ ಹೊಂದಿರುವ ಮನುಷ್ಯರು ನಿರ್ಜೀವ ವಸ್ತುಗಳ ಮೇಲೆ ಅತಿಯಾದ ಒಲವನ್ನ ಹೊಂದಿರುತ್ತಾರೆ.
ಮಾಸ್ಕೋ ಮೂಲದ ರೈನ್ ಗಾರ್ಡನ್ ಕೂಡ ಬ್ರೀಫ್ಕೇಸ್ನತ್ತ ಹೆಚ್ಚು ಆಕರ್ಷಣೆಯನ್ನ ಹೊಂದಿದ್ದಳು . ಹಾಗೂ ಆಕೆ ಅಂತಿಮವಾಗಿ ಬ್ರೀಫ್ಕೇಸ್ನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ.
24 ವಯಸ್ಸಿನ ರೈನ್ ಈ ಹಿಂದೆ ಪುರುಷನೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಆಕೆಗೆ ಯಾವಾಗಲು ಮನುಷ್ಯರಗಿಂತ ಜಾಸ್ತಿ ನಿರ್ಜೀವ ವಸ್ತುಗಳ ಜೊತೆ ಕಾಲ ಕಳೆಯುವುದೇ ಹೆಚ್ಚು ಇಷ್ಟವಾಗುತ್ತಿತ್ತಂತೆ. ಆಗಸ್ಟ್ 2015 ರಲ್ಲಿ ಹಾರ್ಡ್ವೇರ್ ಶಾಪ್ನಲ್ಲಿದ್ದ ಬ್ರೀಫ್ಕೇಸ್ನ್ನ ರೈನ್ ಮೊದಲ ಬಾರಿ ಕಂಡಿದ್ದಾಳೆ. ಅಲ್ಲಿಂದ ಅವಳು ಈ ಬ್ರೀಫ್ಕೇಸ್ ಜೊತೆ ಅತಿಯಾದ ಆಕರ್ಷಣೆಯನ್ನ ಹೊಂದಿದ್ದಾಳೆ.