ಚೀನಾ ಮೂಲದ ಟಿಕ್ಟಾಕ್ ಅಪ್ಲಿಕೇಶನ್ ಮೂಲಕ ತಮ್ಮ ಪ್ರತಿಭೆ ಪ್ರದರ್ಶನ ಮಾಡುವವರ ಗುಂಪು ಒಂದೆಡೆಯಾದ್ರೆ ವಿಚಿತ್ರ ಕೆಲಸ ಮಾಡೋದ್ರ ಮೂಲಕ ಸುದ್ದಿಯಾಗೋ ಮಂದಿಯೇ ಇನ್ನೊಂದು ಕಡೆ.
ಸದ್ಯ ಟಿಕ್ಟಾಕ್ನಲ್ಲಿ ಎರೆಕ್ಷನ್ ಕ್ರೀಮ್ಗಳನ್ನ ಬಳಸಿ ತುಟಿಗಳ ಗಾತ್ರವನ್ನ ಹೆಚ್ಚಿಸುವ ವಿಡಿಯೋವೊಂದು ಭಾರೀ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಆದರೆ ಈ ರೀತಿ ಮಾಡಿದ್ರೆ ಆರೋಗ್ಯಕ್ಕೆ ತುಂಬಾನೇ ಹಾನಿಕಾರಕ ಅಂತಾ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಟಿಕ್ಟಾಕ್ ವಿಡಿಯೋದಲ್ಲಿ ಜೆರ್ರಿ ಮಾಲ್ ಎಂಬ ವ್ಯಕ್ತಿ ಶಿಶ್ನದ ಗಾತ್ರಗಳನ್ನ ಹೆಚ್ಚಿಸಲು ಬಳಕೆ ಮಾಡುವ ಕ್ರೀಮ್ನ ತುಟಿಗೆ ಹಚ್ತಾ ಇರೋದನ್ನ ನೀವು ಕಾಣಬಹುದಾಗಿದೆ. ಸಂಪೂರ್ಣ ತುಟಿಗೆ ಕ್ರೀಂ ಹಚ್ಚಿದ ಬಳಿಕ ಮಾತನಾಡುವ ಜೆರ್ರಿ ತನಗೆ ಝುಂ ಎಂಬ ಅನುಭವಾಗುತ್ತೆ ಎಂದು ಹೇಳಿಕೊಳ್ಳುತ್ತಾನೆ. ಯಾವುದೋ ಒಂದು ಸಿನಿಮಾದಲ್ಲಿ ನಟಿಯೊಬ್ಬಳು ಇದೇ ರೀತಿ ಎರೆಕ್ಷನ್ ಕ್ರೀಂನ್ನು ತುಟಿಗೆ ಹಚ್ಚಿಕೊಂಡು ತುಟಿಯ ಗಾತ್ರ ಹೆಚ್ಚಿಸಿಕೊಂಡಿದ್ದಳಂತೆ. ಈ ಸನ್ನಿವೇಶದಿಂದ ಸ್ಪೂರ್ತಿಗೊಂಡು ನಾನು ಈ ಕೆಲಸ ಮಾಡಿದ್ದೇನೆ ಎಂದು ಟಿಕ್ಟಾಕರ್ ಹೇಳುತ್ತಾನೆ. ಅಲ್ಲದೇ ಈ ಕ್ರೀಂ ಹಚ್ಚಿದ ಬಳಿಕ ಆತನಿಗೆ ತುಟಿ ಉರಿದ ಅನುಭವವೂ ಆಗಿದೆ.
ಈ ವಿಡಿಯೋ ಸಾಕಷ್ಟು ವೈರಲ್ ಆಗಿ ಟ್ರೆಂಡ್ ಕ್ರಿಯೇಟ್ ಮಾಡಿದ ಬಳಿಕ ವೈದ್ಯರು ಈ ರೀತಿ ಎರೆಕ್ಷನ್ ಕ್ರೀಂಗಳನ್ನ ತುಟಿಗೆ ಬಳಸೋದು ಹಾನಿಕಾರಕ ಎಂದು ಎಚ್ಚರಿಕೆ ನೀಡಿದ್ದಾರೆ. ಇದೊಂದು ಮೂರ್ಖತನದ ಕೆಲಸವಾಗಿದೆ. ಈ ರೀತಿ ಎರೆಕ್ಷನ್ ಕ್ರೀಂಗಳನ್ನ ತುಟಿಗೆ ಬಳಸಿದ್ರೆ ತುಟಿಗಳಲ್ಲಿ ಗುಳ್ಳೆ ಉಂಟಾಗಬಹುದು, ತುಟಿಯ ಚರ್ಮವೇ ಕಿತ್ತು ಹೋಗಬಹುದು ಇಲ್ಲವೇ ತುಟಿ ಊದುಕೊಳ್ಳೋದ್ರ ಜೊತೆಗೆ ನೋವು ಉಂಟು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.