ಈ ಸ್ಮಾರ್ಟ್ಫೋನ್ ಇಂಟರ್ನೆಟ್ ಸೇವೆಗಳು ಎಲ್ಲರಿಗೂ ಸರಳವಾಗಿ ಸಿಗುತ್ತಿರುವ ಕಾಲಘಟ್ಟದಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರ ವಿಚಿತ್ರ ಕೆಲಸಗಳನ್ನು ಮಾಡಿಕೊಂಡು ಸುದ್ದಿ ಮಾಡುವುದು ದೊಡ್ಡ ವಿಚಾರವೇನಲ್ಲ.
ಇಂಥ ಅನೇಕ ನಿದರ್ಶನಗಳಲ್ಲಿ ಇದೂ ಒಂದು: 21 ವರ್ಷದ ಜೆಯನ್ನಾ ಫಿಲಿಪ್ಸ್ ಹೆಸರಿನ ಯುವತಿಯೊಬ್ಬರು ನಾಯಿ ಮರಿಗಳಂತೆ ಆಕ್ಟಿಂಗ್ ಮಾಡುವ ಮೂಲಕ ಪ್ರತಿ ವರ್ಷ£100,000ಗಳಷ್ಟು ಹಣವನ್ನು ಜೇಬಿಗಿಳಿಸುತ್ತಿದ್ದಾರೆ.
ಥೇಟ್ ನಾಯಿಯಂತೆ ನೆಲದ ಮೇಲೆ ಹೊರಳಾಡುವುದು, ಚೆಂಡನ್ನು ಚೇಸ್ ಮಾಡುವುದು, ನೀರು ಕುಡಿಯುವುದನ್ನೆಲ್ಲಾ ಮಾಡಿಕೊಂಡು, ಟಿಕ್-ಟಾಕ್ ಹಾಗೂ ಯೂಟ್ಯೂಬ್ನಲ್ಲಿ ಸೆನ್ಸೇಷನ್ ಆಗಿರುವ ಈಕೆಯ ವಾರ್ಷಿಕ ಆದಾಯ 95 ಲಕ್ಷ ರೂ.ಗಳಷ್ಟಿದೆ.
ಸದ್ಯ 1,20,000 ಫಾಲೋವರ್ಗಳನ್ನು ಟಿಕ್ಟಾಕ್ನಲ್ಲಿ ಹೊಂದಿರುವ ಈಕೆಗೆ ಕಂಟೆಂಟ್ ನೋಡಲು ಚಂದಾದಾರು ಪ್ರತಿ ತಿಂಗಳು $20ಗಳಷ್ಟು ಪಾವತಿ ಮಾಡುತ್ತಿದ್ದಾರೆ.