ಕೊರೊನಾ ವೈರಸ್ ಸಂಕಷ್ಟದಿಂದ ಪಾರಾಗಬೇಕು ಅಂತಾ ವಿವಿಧ ದೇಶದಲ್ಲಿ ತರಹೇವಾರಿ ಮಾದರಿಯ ಮಾರ್ಗಸೂಚಿಗಳನ್ನ ತರಲಾಗಿದೆ. ಕ್ವಾರಂಟೈನ್, ಐಸೋಲೇಶನ್, ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಹೀಗೆ ಅನೇಕ ಬಗೆಯ ಮಾರ್ಗಸೂಚಿಗಳನ್ನ ವಿವಿಧ ದೇಶಗಳು ಪಾಲಿಸುತ್ತಿವೆ.
ಕೆಲ ಪ್ರದೇಶಗಳಲ್ಲಂತೂ ವಯಸ್ಕರು ಮಾತ್ರವಲ್ಲದೇ ಜ್ವರದ ಲಕ್ಷಣ ಕಂಡು ಬಂದ ಐದಾರು ವರ್ಷದ ಮಕ್ಕಳನ್ನೂ ಐಸೋಲೇಶನ್ನಲ್ಲಿ ಇಡಲಾದ ಬಗ್ಗೆಯೂ ವರದಿಯಾಗಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲೆಗಳಲ್ಲಿ ಮಕ್ಕಳು ಹಾಗೂ ಸಿಬ್ಬಂದಿಯ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳೋದು ತುಂಬಾನೇ ಮುಖ್ಯ. ಬ್ರಿಟನ್ನ ಶಾಲೆಯೊಂದರಲ್ಲಿ ಬಹಳ ವಿಚಿತ್ರ ಕಾರಣಕ್ಕೆ ಬಾಲಕನೊಬ್ಬನ್ನ ಐಸೋಲೇಷನ್ನಲ್ಲಿ ಇಡಲಾಗಿದೆ. ಶಾಲೆಗೆ ಭೇಟಿ ನೀಡಿದ ಮೊದಲ ದಿನವೇ ಬಾಲಕನ ತಲೆಯಲ್ಲಿ ಎರಡು ಬಣ್ಣದ ಕೂದಲಿದೆ ಎಂಬ ಕಾರಣಕ್ಕೆ ಆತನನ್ನ ಐಸೋಲೇಷನ್ನಲ್ಲಿ ಇಡಲಾಗಿದೆ.
14 ವರ್ಷದ ಬಳಿಕ ಸಿಕ್ತು ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರ
ಯುಕೆನಲ್ಲಿ ಲಾಕ್ಡೌನ್ ವಿಧಿಸಲಾಗಿದ್ದರಿಂದ ಕೇಶ ವಿನ್ಯಾಸಕಾರರ ಬಳಿ ಹೋಗಲು ಸಾಧ್ಯವಾಗದ ಕಾರಣ ಜಾಕೋಬ್ ಎಂಬಾತನ ಕೂದಲು ಈ ರೀತಿ ಆಗಿತ್ತು. ಶಾಲೆಯ ಪುನಾರಂಭದ ಬಳಿಕ ಉತ್ಸಾಹದಿಂದ ಶಾಲೆಗೆ ಹೋದ ಜಾಕೋಬ್ ಕೂದಲನ್ನ ಕಂಡ ಶಿಕ್ಷಕರು ಐಸೋಲೇಷನ್ಗೆ ಹಾಕಿದ್ದಾರೆ .
15 ವರ್ಷದ ಬಾಲಕ ಜಾಕೋಬ್ ಲಾಕ್ಡೌನ್ ಅವಧಿಯಲ್ಲಿ ಕೂದಲಿಗೆ ತಾನೇ ಬಣ್ಣ ಹಾಕಿಕೊಳ್ಳಲು ಹೋಗಿ ಈ ರೀತಿ ಯಡವಟ್ಟು ಮಾಡಿಕೊಂಡಿದ್ದನಂತೆ. ಗುಲಾಬಿ ಹಾಗೂ ನೀಲಿ ಬಣ್ಣದ ಡೈನಿಂದ ಕೂದಲಿಗೆ ಈ ಬಣ್ಣ ಬರಿಸಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಈ ರೀತಿ ಕೇಶಕ್ಕೆ ಬಣ್ಣ ಹಾಕಿಕೊಳ್ಳೋದು ಶಾಲಾ ನಿಯಮಕ್ಕೆ ವಿರುದ್ಧವಾಗಿತ್ತು. ಲಾಕ್ಡೌನ್ ಅವಧಿಯಲ್ಲಿ ಕೇಶ ವಿನ್ಯಾಸಕರೂ ಸಿಗದ ಕಾರಣ ಶಾಲೆ ಪುನಾರಂಭದ ವೇಳೆ ಕೂದಲನ್ನ ಸರಿ ಮಾಡಿಕೊಳ್ಳೋಕೆ ಸಾಧ್ಯವಾಗಲಿಲ್ಲ. ಆದರೆ ಶಾಲೆಯ ಈ ಕ್ರಮವನ್ನ ಜಾಕೋಬ್ ತಾಯಿ ಧಿಕ್ಕರಿಸಿದ್ದಾರೆ.