alex Certify ನಗು ತರಿಸುತ್ತೆ ಈ ವಿಚಿತ್ರ ಮಾದರಿಯ ಬ್ರಾಂಡೆಡ್ ವಸ್ತುಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಈ ವಿಚಿತ್ರ ಮಾದರಿಯ ಬ್ರಾಂಡೆಡ್ ವಸ್ತುಗಳು..!

ಫ್ಯಾಶನ್​ ಹಾಗೂ ಆದ್ಯತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತೆ. ಈಗಾಗಲೇ ಸಾಕಷ್ಟು ಬ್ರ್ಯಾಂಡ್​ಗಳು ತನ್ನ ಗ್ರಾಹಕರನ್ನ ಸೆಳೆಯೋಕೆ ಇನ್ನಿಲ್ಲದ ಕಸರತ್ತನ್ನ ಮಾಡುತ್ತೆ. ಆದರೆ ದುಬಾರಿ ಬೆಲೆಯ ಈ ಬ್ರ್ಯಾಂಡೆಡ್​ ಬಟ್ಟೆಗಳು ಹಾಗೂ ವಸ್ತುಗಳು ನಗುತರಿಸುವಂತೆ ಮಾಡುತ್ತವೆ.

ಇಟಾಲಿಯನ್​ ಐಷಾರಾಮಿ ಬ್ರ್ಯಾಂಡ್​ ಗುಶ್ಶಿ ಒಂದು ಜೋಡಿ ಕೊಳಕು ಶೂಗಳಿಗೆ ಬರೋಬ್ಬರಿ 60 ಸಾವಿರ ದರ ಫಿಕ್ಸ್ ಮಾಡಿದೆ. ಮಣ್ಣು ಮಣ್ಣಾಗಿರುವ ಶೂಗೆ ಡರ್ಟಿ ಸ್ನಿಕರ್ಸ್ ಅಂತಾನೂ ಹೆಸರಿಡಲಾಗಿದೆ.

ಇದು ಶೂ ಕತೆಯಾದ್ರೆ ಕೊರೊನಾ ವೈರಸ್​ ಬಳಿಕ ಮಾಸ್ಕ್​ ಹಾಗೂ ಫೇಸ್​ ಶೀಲ್ಡ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಲೂಯಿ ವಿಟಾನ್​ ಒಂದು ಫೇಸ್​ ಶೀಲ್ಡ್​ಗೆ 70 ಸಾವಿರ ರೂಪಾಯಿ ದರ ನಿಗದಿ ಮಾಡಿದ್ದು ಈ ಬೆಲೆ ನೋಡಿದ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ .

ಸೆಪ್ಟೆಂಬರ್​ನಲ್ಲಿ ಹೆಸರಾಂತ ಬ್ರ್ಯಾಂಡ್​ ಕಂಪನಿ ಗುಶ್ಶಿ ತನ್ನ ಈ ವರ್ಷದ ಚಳಿಗಾಲದ ಕಲೆಕ್ಷನ್​ ಬಿಡುಗಡೆ ಮಾಡಿದೆ. ಇದರಲ್ಲಿ ಒಂದು ಕೊಳೆಯಾದ ಬಣ್ಣದ ಜೀನ್ಸ್ ಪ್ಯಾಂಟ್​ಗೆ 88290 ರೂಪಾಯಿ ದರ ನಿಗದಿ ಮಾಡಿದೆ.

ಇನ್ನು ಗಿವೆಂಚಿ ಕೂಡ ವಿಚಿತ್ರ ಮಾದರಿ ಸಾಕ್ಸ್ ಹಾಗೂ ಶೂಗಳನ್ನ ಬಿಡುಗಡೆ ಮಾಡಿದ್ದು ಇದನ್ನ ನೋಡಿದ ಜನರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...