ಫ್ಯಾಶನ್ ಹಾಗೂ ಆದ್ಯತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತೆ. ಈಗಾಗಲೇ ಸಾಕಷ್ಟು ಬ್ರ್ಯಾಂಡ್ಗಳು ತನ್ನ ಗ್ರಾಹಕರನ್ನ ಸೆಳೆಯೋಕೆ ಇನ್ನಿಲ್ಲದ ಕಸರತ್ತನ್ನ ಮಾಡುತ್ತೆ. ಆದರೆ ದುಬಾರಿ ಬೆಲೆಯ ಈ ಬ್ರ್ಯಾಂಡೆಡ್ ಬಟ್ಟೆಗಳು ಹಾಗೂ ವಸ್ತುಗಳು ನಗುತರಿಸುವಂತೆ ಮಾಡುತ್ತವೆ.
ಇಟಾಲಿಯನ್ ಐಷಾರಾಮಿ ಬ್ರ್ಯಾಂಡ್ ಗುಶ್ಶಿ ಒಂದು ಜೋಡಿ ಕೊಳಕು ಶೂಗಳಿಗೆ ಬರೋಬ್ಬರಿ 60 ಸಾವಿರ ದರ ಫಿಕ್ಸ್ ಮಾಡಿದೆ. ಮಣ್ಣು ಮಣ್ಣಾಗಿರುವ ಶೂಗೆ ಡರ್ಟಿ ಸ್ನಿಕರ್ಸ್ ಅಂತಾನೂ ಹೆಸರಿಡಲಾಗಿದೆ.
ಇದು ಶೂ ಕತೆಯಾದ್ರೆ ಕೊರೊನಾ ವೈರಸ್ ಬಳಿಕ ಮಾಸ್ಕ್ ಹಾಗೂ ಫೇಸ್ ಶೀಲ್ಡ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಲೂಯಿ ವಿಟಾನ್ ಒಂದು ಫೇಸ್ ಶೀಲ್ಡ್ಗೆ 70 ಸಾವಿರ ರೂಪಾಯಿ ದರ ನಿಗದಿ ಮಾಡಿದ್ದು ಈ ಬೆಲೆ ನೋಡಿದ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ .
ಸೆಪ್ಟೆಂಬರ್ನಲ್ಲಿ ಹೆಸರಾಂತ ಬ್ರ್ಯಾಂಡ್ ಕಂಪನಿ ಗುಶ್ಶಿ ತನ್ನ ಈ ವರ್ಷದ ಚಳಿಗಾಲದ ಕಲೆಕ್ಷನ್ ಬಿಡುಗಡೆ ಮಾಡಿದೆ. ಇದರಲ್ಲಿ ಒಂದು ಕೊಳೆಯಾದ ಬಣ್ಣದ ಜೀನ್ಸ್ ಪ್ಯಾಂಟ್ಗೆ 88290 ರೂಪಾಯಿ ದರ ನಿಗದಿ ಮಾಡಿದೆ.
ಇನ್ನು ಗಿವೆಂಚಿ ಕೂಡ ವಿಚಿತ್ರ ಮಾದರಿ ಸಾಕ್ಸ್ ಹಾಗೂ ಶೂಗಳನ್ನ ಬಿಡುಗಡೆ ಮಾಡಿದ್ದು ಇದನ್ನ ನೋಡಿದ ಜನರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.