ಸ್ಕ್ಯೂಬಾ ಡೈವರ್ ಒಬ್ಬರು ಮೀನಿನ ಗಾಳಕ್ಕೆ ಸಿಕ್ಕಿಹಾಕಿಕೊಂಡ ಅಚ್ಚರಿದಾಯಕ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಲಬಾಮಾ ಬಳಿ ಆಳ ಸಾಗರದಲ್ಲಿ ಈಜುತ್ತಿದ್ದ ಥಾಮ್ಸನ್ ಹೆಸರಿನ ವ್ಯಕ್ತಿಯೊಬ್ಬರಿಗೆ ಈ ಅನುಭವವಾಗಿದೆ.
ಥಾಮ್ಸನ್ರ ಸ್ಕ್ಯೂಬಾ ಡೈವಿಂಗ್ ಸೂಟ್, ಕತ್ತು ಹಾಗೂ ಕೈಗಳನ್ನು ಹಿಡಿದುಕೊಂಡ ದೊಡ್ಡ ಗಾಳವು ಅವರನ್ನು ನೀರಿನ ಮೇಲ್ಮೈಗೆ ತರುವಷ್ಟರಲ್ಲಿ, ಆ ಗಾಳ ಹಾಕಿದ್ದ ದೋಣಿಯು ಅಲ್ಲಿಂದ ಹೊರಟುಹೋಗಿದ್ದ ಕಾರಣ ಅವರಿಗೆ ಹೆಚ್ಚಿಗೆ ಏನೂ ತಿಳಿಯಲು ಆಗಲಿಲ್ಲ.
ಸಾಕಷ್ಟು ಮೀನುಗಳನ್ನು ಗಾಳ ಹಾಕಿ ಹಿಡಿದಿರುವ ಥಾಮ್ಸನ್ ಖುದ್ದು ಗಾಳಕ್ಕೆ ಸಿಲುಕಿದ ಈ ಘಟನೆಯಲ್ಲಿ ಅದೃಷ್ಟವಶಾತ್ ಅವರಿಗೆ ಏನೂ ಗಾಯವಾಗಿಲ್ಲ.