ಕೊರೋನಾ ವೈರಸ್ ನ ಭೀತಿ ಮನುಷ್ಯರನ್ನಷ್ಟೇ ಅಲ್ಲದೆ, ಪ್ರಾಣಿ – ಪಕ್ಷಿಗಳನ್ನೂ ಕಾಡಲಾರಂಭಿಸಿದೆ.
ಅವೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದು, ಸರ್ಕಾರದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿವೆ.
ಮಳಿಗೆಯೊಂದರ ಮುಂದೆ ಅಂತರ ಕಾಯ್ದುಕೊಳ್ಳಲು ಮನುಷ್ಯರಿಗಾಗಿ ಬರೆದ ಗೆರೆ ದಾಟದೆ ನಿಂತ ಬೆಳ್ಳಕ್ಕಿಯೊಂದು ಎಲ್ಲರ ಗಮನ ಸೆಳೆದಿದೆ.
ಹಕ್ಕಿಯ ಮುಂದಿನ ಸಾಲಿನಲ್ಲಿ ವ್ಯಕ್ತಿಯೊಬ್ಬರು ನಿಂತಿದ್ದು, ಅವರನ್ನು ದಾಟಿ ಮುಂದೆ ಹೋಗಬಾರದೋ ಏನೋ ? ನಾನೂ ಈ ಗೆರೆ ದಾಟಬಾರದೇನೋ ? ಅಂತರ ಕಾಯ್ದುಕೊಳ್ಳಬೇಕೇನೋ ? ನನಗೂ ಸರ್ಕಾರದ ನಿಯಮಗಳೆಲ್ಲ ಅನ್ವಯಿಸುತ್ತವೆಯೋ ಏನೋ ಎಂಬ ರೀತಿಯಲ್ಲಿ ನಿಂತಿರುವುದನ್ನು ದಾರಿಹೋಕರು ಕ್ಲಿಕ್ಕಿಸಿದ್ದಾರೆ. ಅನಿಮಲ್ ಬೀಯಿಂಗ್ ಬ್ರೋಸ್ ಎನ್ನುವ ಪೇಜ್ ಅಲ್ಲಿ ಪೋಸ್ಟ್ ಮಾಡಿರುವ ಈ ಪೋಟೋ ವೈರಲ್ ಆಗಿದೆ.