
ಈ ದೃಶ್ಯಾವಳಿಗಳನ್ನ ಅಮೆರಿಕದ ವಾರ್ಡ್ ಟ್ರಾನ್ಸ್ಪೋರ್ಟ್ ಹಾಗೂ ಲಾಜಿಸ್ಟಿಕ್ಸ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ.
ವಾಹನ ಚಲಾವಣೆ ಮಾಡುವ ವೇಳೆ ಎಂತಹ ಸಂದಿಗ್ಧ ಸ್ಥಿತಿಯನ್ನ ಎದುರಿಸೋಕು ನೀವು ತಯಾರಿರಬೇಕು ಅನ್ನೋದನ್ನ ನಮ್ಮ ಷಾರ್ಲೆಟ್ ಚಾಲಕ ಸಾಬೀತುಪಡಿಸಿದ್ದಾರೆ ಅಂತಾ ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
20 ಸೆಕೆಂಡ್ಗಳ ವಿಡಿಯೋದಲ್ಲಿ ಟ್ರಕ್ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು. ಇದೇ ವೇಳೆ ಎದುರಿನಿಂದ ಬಂದ ಹಕ್ಕಿಯೊಂದು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡಿದ್ದ ಮೀನನ್ನ ಟ್ರಕ್ನ ಮುಂದಿನ ಗಾಜಿನ ಮೇಲೆ ಬೀಳಿಸಿದೆ. ಇದರಿಂದ ಕಾರಿನ ಗಾಜು ಮಂಜು ಮಂಜಾಗಿದೆ.
ಆದರೆ ಇಂತಹ ಸಂದರ್ಭದಲ್ಲಿ ಟ್ರಕ್ ಚಾಲಕ ನಿಯಂತ್ರಣ ತಪ್ಪದೇ ಯಶಸ್ವಿಯಾಗಿ ಟ್ರಕ್ನ್ನು ಚಲಾಯಿಸಿದ್ದಾರೆ. ಇನ್ನು ಈ ಸಂಬಂಧ ಟ್ರಕ್ ಕಂಪನಿ, ಟ್ರಕ್ಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಚಾಲಕ ಕೂಡ ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.