alex Certify ವಿಚ್ಚೇದನದ ಬಳಿಕ ಮೊದಲ ಬಾರಿ ಪುತ್ರಿಯೊಂದಿಗೆ ಕಾಣಿಸಿಕೊಂಡ ಬಿಲ್‌ ಗೇಟ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಚೇದನದ ಬಳಿಕ ಮೊದಲ ಬಾರಿ ಪುತ್ರಿಯೊಂದಿಗೆ ಕಾಣಿಸಿಕೊಂಡ ಬಿಲ್‌ ಗೇಟ್ಸ್

ತಮ್ಮ ವಿಚ್ಛೇದನದ ಬಳಿಕ ಇದೇ ಮೊದಲ ಬಾರಿಗೆ ಬಿಲ್​ಗೇಟ್ಸ್​ ಪುತ್ರಿಯ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನ ಶೇರ್​ ಮಾಡಿರುವ ಜೆನ್ನಿಫರ್​, ಕುಟುಂಬದೊಂದಿಗೆ ಕಳೆಯುವ ಗುಣಮಟ್ಟದ ಸಮಯಕ್ಕಿಂತ ಅಮೂಲ್ಯವಾದದ್ದು ಇನ್ನೊಂದಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.

ಜೆನ್ನಿಫರ್,​​ ಬಿಲ್​ ಗೇಟ್ಸ್ ಹಾಗೂ ಮೆಲಿಂದಾ ದಂಪತಿಯ ಮೊದಲ ಪುತ್ರಿಯಾಗಿದ್ದಾರೆ. ಬಿಲ್​ ಗೇಟ್ಸ್ ವಿಚ್ಛೇದನದ ವಿಚಾರವನ್ನ ಬಹಿರಂಗಪಡಿಸಿದ್ದ ವೇಳೆ ಜೆನ್ನಿಫರ್​ ಸೇರಿದಂತೆ ಗೇಟ್ಸ್ ಮಕ್ಕಳು ತಮ್ಮ ತಂದೆಯ ಮೇಲೆ ಕೋಪಗೊಂಡಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಡಿತ್ತು. ಆದರೆ ಈ ಫೋಟೋ ಮೂಲಕ ಜೆನ್ನಿಫರ್ ಈ ಎಲ್ಲಾ ವದಂತಿಗೆ ಕೊನೆ ಹಾಡಿದ್ದಾರೆ.

ಮೆಡಿಕಲ್​ ವಿದ್ಯಾರ್ಥಿನಿಯಾಗಿರುವ ಜೆನ್ನಿಫರ್​ ಹಾಗೂ ಬಿಲ್​ ಗೇಟ್ಸ್​ ಈ ಫೋಟೋದಲ್ಲಿ ಹಸನ್ಮುಖಿಯಾಗಿ ನಿಂತಿರೋದನ್ನ ನೀವು ಕಾಣಬಹುದಾಗಿದೆ. ಅಲ್ಲದೇ ಅವರ ಸಾಕು ನಾಯಿ ಕೂಡ ಈ ಫೋಟೋದಲ್ಲಿದೆ. ಈ ಫೋಟೋವನ್ನ ಯಾವ ಸ್ಥಳದಲ್ಲಿ ತೆಗೆಯಲಾಗಿದೆ ಅನ್ನೋದಕ್ಕೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಕೆಲ ದಿನಗಳ ಹಿಂದಷ್ಟೇ ಮೆಲಿಂದಾ​ಗೆ ವಿಚ್ಛೇದನ ನೀಡುವ ಮೂಲಕ ಬಿಲ್​ ಗೇಟ್ಸ್​ ತಮ್ಮ 23 ವರ್ಷದ ದಾಂಪತ್ಯ ಜೀವನವನ್ನ ಕೊನೆಗೊಳಿಸಿದ್ದಾರೆ.

ಇವರಿಬ್ಬರ ದಾಂಪತ್ಯ ಜೀವನ ಕೊನೆಗಾಣಲು ಸ್ಪಷ್ಟ ಕಾರಣವನ್ನ ಬಹಿರಂಗಪಡಿಸಲಾಗಿಲ್ಲ. ಆದರೆ ಕೋರ್ಟ್​ಗೆ ನೀಡಲಾದ ಪತ್ರದಲ್ಲಿ ಮೆಲಿಂದಾ ನಮ್ಮಿಬ್ಬರ ನಡುವಿನ ಸಂಬಂಧ ಸರಿಪಡಿಸಲಾರದಷ್ಟರ ಮಟ್ಟಿಗೆ ಮುರಿದುಹೋಗಿದೆ ಎಂದು ಉಲ್ಲೇಖಿಸಿದ್ದರು.

ಬ್ಯುಸಿನೆಸ್​ ಇನ್​ಸೈಡರ್​ ರಿಪೋರ್ಟ್ ನೀಡಿರುವ ಮಾಹಿತಿಯ ಪ್ರಕಾರ, ಮೆಲಿಂದಾ 2019ರಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಂತೆ. ಬಿಲ್​ ಗೇಟ್ಸ್​ರ ಅಕ್ರಮ ಸಂಬಂಧದ ಆರೋಪವೇ ಈ ದಾಂಪತ್ಯ ಮುರಿಯಲು ಕಾರಣ ಎನ್ನಲಾಗ್ತಿದೆ. ಆದರೆ ಕೊನೆಯ ಮಗಳಿಗೆ 18 ವರ್ಷ ತುಂಬದ ಕಾರಣ ಮೇಲಿಂದಾ ಹಾಗೂ ಬಿಲ್​ ಗೇಟ್ಸ್ ಕಾದು ಇದೀಗ ತಮ್ಮ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...