
ಜೆನ್ನಿಫರ್, ಬಿಲ್ ಗೇಟ್ಸ್ ಹಾಗೂ ಮೆಲಿಂದಾ ದಂಪತಿಯ ಮೊದಲ ಪುತ್ರಿಯಾಗಿದ್ದಾರೆ. ಬಿಲ್ ಗೇಟ್ಸ್ ವಿಚ್ಛೇದನದ ವಿಚಾರವನ್ನ ಬಹಿರಂಗಪಡಿಸಿದ್ದ ವೇಳೆ ಜೆನ್ನಿಫರ್ ಸೇರಿದಂತೆ ಗೇಟ್ಸ್ ಮಕ್ಕಳು ತಮ್ಮ ತಂದೆಯ ಮೇಲೆ ಕೋಪಗೊಂಡಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಡಿತ್ತು. ಆದರೆ ಈ ಫೋಟೋ ಮೂಲಕ ಜೆನ್ನಿಫರ್ ಈ ಎಲ್ಲಾ ವದಂತಿಗೆ ಕೊನೆ ಹಾಡಿದ್ದಾರೆ.
ಮೆಡಿಕಲ್ ವಿದ್ಯಾರ್ಥಿನಿಯಾಗಿರುವ ಜೆನ್ನಿಫರ್ ಹಾಗೂ ಬಿಲ್ ಗೇಟ್ಸ್ ಈ ಫೋಟೋದಲ್ಲಿ ಹಸನ್ಮುಖಿಯಾಗಿ ನಿಂತಿರೋದನ್ನ ನೀವು ಕಾಣಬಹುದಾಗಿದೆ. ಅಲ್ಲದೇ ಅವರ ಸಾಕು ನಾಯಿ ಕೂಡ ಈ ಫೋಟೋದಲ್ಲಿದೆ. ಈ ಫೋಟೋವನ್ನ ಯಾವ ಸ್ಥಳದಲ್ಲಿ ತೆಗೆಯಲಾಗಿದೆ ಅನ್ನೋದಕ್ಕೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಕೆಲ ದಿನಗಳ ಹಿಂದಷ್ಟೇ ಮೆಲಿಂದಾಗೆ ವಿಚ್ಛೇದನ ನೀಡುವ ಮೂಲಕ ಬಿಲ್ ಗೇಟ್ಸ್ ತಮ್ಮ 23 ವರ್ಷದ ದಾಂಪತ್ಯ ಜೀವನವನ್ನ ಕೊನೆಗೊಳಿಸಿದ್ದಾರೆ.
ಇವರಿಬ್ಬರ ದಾಂಪತ್ಯ ಜೀವನ ಕೊನೆಗಾಣಲು ಸ್ಪಷ್ಟ ಕಾರಣವನ್ನ ಬಹಿರಂಗಪಡಿಸಲಾಗಿಲ್ಲ. ಆದರೆ ಕೋರ್ಟ್ಗೆ ನೀಡಲಾದ ಪತ್ರದಲ್ಲಿ ಮೆಲಿಂದಾ ನಮ್ಮಿಬ್ಬರ ನಡುವಿನ ಸಂಬಂಧ ಸರಿಪಡಿಸಲಾರದಷ್ಟರ ಮಟ್ಟಿಗೆ ಮುರಿದುಹೋಗಿದೆ ಎಂದು ಉಲ್ಲೇಖಿಸಿದ್ದರು.
ಬ್ಯುಸಿನೆಸ್ ಇನ್ಸೈಡರ್ ರಿಪೋರ್ಟ್ ನೀಡಿರುವ ಮಾಹಿತಿಯ ಪ್ರಕಾರ, ಮೆಲಿಂದಾ 2019ರಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಂತೆ. ಬಿಲ್ ಗೇಟ್ಸ್ರ ಅಕ್ರಮ ಸಂಬಂಧದ ಆರೋಪವೇ ಈ ದಾಂಪತ್ಯ ಮುರಿಯಲು ಕಾರಣ ಎನ್ನಲಾಗ್ತಿದೆ. ಆದರೆ ಕೊನೆಯ ಮಗಳಿಗೆ 18 ವರ್ಷ ತುಂಬದ ಕಾರಣ ಮೇಲಿಂದಾ ಹಾಗೂ ಬಿಲ್ ಗೇಟ್ಸ್ ಕಾದು ಇದೀಗ ತಮ್ಮ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ.