ಕಳೆದ ವರ್ಷ ಗಡಿಯಲ್ಲಿ ಚೀನಾ ನಡೆಸಿದ ಪುಂಡಾಟಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಚೀನಾ ಮೂಲದ ಹಲವು ಆಪ್ ಗಳ ಮೇಲೆ ನಿಷೇಧ ಹೇರಿತ್ತು. ಅಲ್ಲದೆ ವಾಣಿಜ್ಯ ವ್ಯವಹಾರಗಳ ಮೇಲೂ ಕಡಿವಾಣ ಹಾಕಿತ್ತು. ಇದೀಗ ಗಡಿವಿವಾದ ತಣ್ಣಗಾಗಿದ್ದು ಹೀಗಾಗಿ ಚೀನಾ ಮೂಲದ 150 ಹೂಡಿಕೆಗಳಿಗೆ ಅಂಗೀಕಾರ ನೀಡಲಾಗಿದೆ. ಆದರೆ ಆಪ್ ಗಳ ಮೇಲಿನ ನಿಷೇಧ ಮುಂದುವರೆದಿದೆ.
ಹೊಸ ಟಿವಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್
ಇದರ ಮಧ್ಯೆ ಇದೀಗ ಚೀನಾಗೆ ಮತ್ತೊಂದು ಶಾಕ್ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಚೀನಾ ಮೂಲದ ಹುವೈ ಟೆಲಿಕಾಂ ಕಂಪನಿಯ ಸಲಕರಣೆಗಳು ಮತ್ತು ಬಿಡಿಭಾಗಗಳ ಮೇಲೆ ನಿಷೇಧ ಹೇರಲು ನಿರ್ಧರಿಸಲಾಗಿದೆ. ಜೂನ್ ತಿಂಗಳಿನಿಂದ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಲಾಗುತ್ತಿದ್ದು, ಆ ಬಳಿಕ ಭಾರತೀಯ ಟೆಲಿಕಾಂ ಕಂಪನಿಗಳು ಸರ್ಕಾರ ಅನುಮೋದಿಸಿದ ಕಂಪನಿಗಳಿಂದಲೇ ಬಿಡಿಭಾಗಗಳನ್ನು ಖರೀದಿಸಬೇಕಾಗುತ್ತದೆ.
ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರ ನಿಷೇಧ ಹೇರಿಕೆಗೆ ಮುಂದಾಗಿದೆ ಎನ್ನಲಾಗಿದ್ದು, ಜೊತೆಗೆ ಸ್ಥಳೀಯ ಉತ್ಪಾದಕರನ್ನು ಉತ್ತೇಜಿಸುವ ಉದ್ದೇಶವೂ ಇದರ ಹಿಂದಿದೆ. ಗಮನಾರ್ಹ ಸಂಗತಿಯೆಂದರೆ ಅಮೆರಿಕಾದಲ್ಲಿ ಹುವೈನ ಸಾಧನಗಳನ್ನು ಬಳಸದಂತೆ ಈಗಾಗಲೇ ನಿಷೇಧ ಹೇರಲಾಗಿದೆ.