alex Certify BIG NEWS: ಗಾಳಿಯಲ್ಲಿರುವ ಕೊರೊನಾ ಸೋಂಕು ಪತ್ತೆ ಹಚ್ಚುತ್ತೆ ಈ ಸಾಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಾಳಿಯಲ್ಲಿರುವ ಕೊರೊನಾ ಸೋಂಕು ಪತ್ತೆ ಹಚ್ಚುತ್ತೆ ಈ ಸಾಧನ

ಕೊರೊನಾ ವೈರಸ್ ಗಳು ಗಾಳಿಯಲ್ಲಿ ಇದೆಯಾ, ಇಲ್ವಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಂಡು ಹಿಡಿಯುವುದು ಸುಲಭವಾಗಲಿದೆ. ಕೆನಡಾದ ಕಂಪನಿಯೊಂದು ಗಾಳಿಯಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚುವಂತಹ ಸಾಧನವನ್ನು ವಿನ್ಯಾಸಗೊಳಿಸಿದೆ.

ಕಂಟ್ರೋಲ್ ಎನರ್ಜಿ ಕಾರ್ಪ್ ಎಂಬ ಕಂಪನಿಯು ಈಗಾಗಲೇ ಒಳಾಂಗಣ ಗಾಳಿಯ ಗುಣಮಟ್ಟ ಮತ್ತು ಮೇಲ್ವಿಚಾರಣಾ ಸಾಧನಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿದೆ. ಕೊರೊನಾ ಸಾಂಕ್ರಾಮಿಕ ರೋಗವು ಪ್ರಾರಂಭವಾದ ನಂತರ ಕಂಪನಿಯು ಕೊರೊನಾ ವೈರಸ್ ಪತ್ತೆ ಸಾಧನವನ್ನು ವಿನ್ಯಾಸಗೊಳಿಸುವ ಕೆಲಸವನ್ನು ಪ್ರಾರಂಭಿಸಿತ್ತು.

ಒಂಟಾರಿಯೊದ ಎರಡು ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್ ಸಂಶೋಧಿಸಿದ ನಂತರ, ಕಂಪನಿಯು ಬಯೋಕ್ಲೌಡ್ ಎಂಬ ಸಾಧನವನ್ನು ತಯಾರಿಸಿದೆ. ಈ ಸಾಧನವು ಹ್ಯಾಂಡ್ ಡ್ರೈಯರ್ ನಂತೆ ಕಾಣುತ್ತದೆ. ಇದು ಗಾಳಿಯನ್ನು ಒಳಕ್ಕೆ ಸೆಳೆಯುತ್ತದೆ ಮತ್ತು ಗಾಳಿಯಲ್ಲಿ ಕೊರೊನಾ ಸೋಂಕು ಇದೆಯೇ ಎಂಬುದನ್ನು ಪರೀಕ್ಷಿಸುತ್ತದೆ. ನಿರ್ದಿಷ್ಟ ಸ್ಥಳದ ಗಾಳಿಯಲ್ಲಿ ಕೊರೊನಾ ಸೋಂಕಿದೆ ಎಂಬುದು ಗೊತ್ತಾದ್ರೆ ನಂತ್ರ ಜನರನ್ನು ಪ್ರತ್ಯೇಕವಾಗಿ ಪರೀಕ್ಷಿಸಬಹುದು. ಕಚೇರಿಗಳಿಗೆ ಇದು ಉತ್ತಮವೆಂದು ಪರಿಗಣಿಸಲಾಗಿದೆ.

ಕೆನಡಾದ ವೆಸ್ಟರ್ನ್ ಯೂನಿವರ್ಸಿಟಿಯ ಮೈಕ್ರೋಬಯಾಲಜಿ ಪ್ರಾಧ್ಯಾಪಕ ಡೇವಿಡ್ ಹೆನ್ರಿಕ್ಸ್ ಬಯೋಕ್ಲೌಡ್ ಸಾಧನವನ್ನು ಪರೀಕ್ಷಿಸಿದ್ದಾರೆ. ಕಂಪನಿಯು ಈ ಸಾಧನವನ್ನು ನವೆಂಬರ್ ವೇಳೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಇದರ ಬೆಲೆ ಸುಮಾರು 8.8 ಲಕ್ಷ ರೂಪಾಯಿಗಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...