alex Certify BIG NEWS: ಕೊರೊನಾ ಲಸಿಕೆ ಯಶಸ್ಸಿನ ಕುರಿತು ರಷ್ಯಾದಿಂದ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಲಸಿಕೆ ಯಶಸ್ಸಿನ ಕುರಿತು ರಷ್ಯಾದಿಂದ ಮಹತ್ವದ ಹೇಳಿಕೆ

ಕೊರೊನಾ ವಿರುದ್ಧ ತಯಾರಿಸಲಾಗುತ್ತಿರುವ ಸ್ಪುಟ್ನಿಕ್​ ವಿ ಲಸಿಕೆ ಶೇಕಡಾ 92ರಷ್ಟು ಪರಿಣಾಮಕಾರಿಯಾಗಿದೆ ಅಂತಾ ರಷ್ಯಾ ಹೇಳಿದೆ. 40000 ಸ್ವಯಂ ಸೇವಕರ ಮೇಲೆ ನಡೆಸಲಾದ ಸಮೀಕ್ಷೆಯು ಈ ಫಲಿತಾಂಶ ನೀಡಿದೆ .

ರಷ್ಯಾದ ನೇರ ಹೂಡಿಕೆ ನಿಧಿ ಹಾಗೂ ರಷ್ಯಾ ಒಕ್ಕೂಟದ ಆರೋಗ್ಯ ಸಚಿವಾಲಯ ಪತ್ರಿಕಾ ಪ್ರಕಟಣೆ ಮೂಲಕ ಈ ಮಾಹಿತಿ ನೀಡಿದೆ. ಸ್ಪುಟ್ನಿಕ್​ ವಿ ಲಸಿಕೆ ನೀಡಿದ 21 ದಿನಗಳವರೆಗೂ ಯಾವುದೇ ದೂರುಗಳು ಬಂದಿಲ್ಲ ಅಂತಾ ಈ ಪ್ರಕಟಣೆ ತಿಳಿಸಿದೆ.

ಪ್ರಸ್ತುತ ಸ್ಪುಟ್ನಿಕ್ ವಿ ಲಸಿಕೆಗಾಗಿನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಮಾಡಲಾಗಿದೆ ಮತ್ತು ಬೆಲಾರಸ್, ಯುಎಇ, ವೆನೆಜುವೆಲಾ ಮತ್ತು ಇತರ ದೇಶಗಳಲ್ಲಿ ಇದು ನಡೆಯುತ್ತಿದೆ. ಭಾರತದಲ್ಲಿ, ಲಸಿಕೆಯ ಎರಡು, ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ.

ಪ್ರಸ್ತುತ, 40,000 ಸ್ವಯಂಸೇವಕರು ಸ್ಪುಟ್ನಿಕ್ ವಿ ವಿವಿಧ ಹಂತದ ಪ್ರಯೋಗದಲ್ಲಿ ನಿರತವಾಗಿದ್ದು 20 ಸಾವಿರ ಮಂದಿಯನ್ನು ಮೊದಲ ಡೋಸ್​ಗೆ ಹಾಗೂ 16 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮೊದಲ ಮತ್ತು ಎರಡನೇ ಡೋಸ್​ ಪ್ರಯೋಗಗಳಿಗೆ ಒಳಪಡಿಸಲಾಗಿದೆ.

ಇದಕ್ಕೂ ಮೊದಲು ಸೆಪ್ಟೆಂಬರ್​ 4ರಂದು ದಿ ಲ್ಯಾನ್ಸೆಟ್​​ನಲ್ಲಿ ಪ್ರಕಟವಾದ ಸ್ಪುಟ್ನಿಕ್​ ವಿ ಲಸಿಕೆಯ 1 ಹಾಗೂ 2ನೇ ಕ್ಲಿನಿಕಲ್​ ಪ್ರಯೋಗದ ಫಲಿತಾಂಶಗಳು ಯಾವುದೇ ಗಂಭೀರ ಪರಿಣಾಮವನ್ನ ತೋರಿಸಿರಲಿಲ್ಲ.

ಸ್ಪುಟ್ನಿಕ್​ ವಿ ಲಸಿಕೆ ಕ್ಲಿನಿಕಲ್​ ಟ್ರಯಲ್​ಗಳಲ್ಲಿ ಯಶಸ್ಸನ್ನ ಕಾಣುತ್ತಿದೆ. ಇದು ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಉತ್ತಮ ಪರಿಣಾಮ ಬೀರಲಿದೆ ಅಂತಾ ರಷ್ಯಾದ ಆರೋಗ್ಯ ಸಚಿವಾಲಯದ ಮಂತ್ರಿ ಮೈಖೆಲ್​​ ಮುರಾಸ್ಕೋ ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...