alex Certify BIG NEWS: ಅಮೆರಿಕಾದಿಂದ ಕೊನೆಗೂ ಕೊರೊನಾ ಲಸಿಕೆ ಸಿದ್ಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಮೆರಿಕಾದಿಂದ ಕೊನೆಗೂ ಕೊರೊನಾ ಲಸಿಕೆ ಸಿದ್ಧ

ಕೊರೊನಾಗೆ ಯುಎಸ್ ಎ ಕಂಡು ಹಿಡಿದಿರುವ ಲಸಿಕೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಔಷಧಿ ಕಂಪನಿ ಮಾಡರ್ನಾ, ಈ ಲಸಿಕೆಯನ್ನು 8 ಮಂದಿಗಳಿಗೆ ನೀಡಲಾಗಿದ್ದು, ಸಕಾರಾತ್ಮಕ ಪರಿಣಾಮ ಕಂಡು ಬಂದಿದೆ ಎಂದಿದೆ. ಅಮೆರಿಕಾದಲ್ಲಿ ಜನರ ಮೇಲೆ ಪ್ರಯೋಗ ಮಾಡಿದ ಮೊದಲ ಲಸಿಕೆ ಇದಾಗಿದೆ.

ಮಾರ್ಚ್ ಆರಂಭದಲ್ಲಿ, ಎಂಟು ಜನರಿಗೆ ಲಸಿಕೆ ಪೂರಕಗಳನ್ನು ನೀಡಲಾಗಿತ್ತು. ಎಲ್ಲಾ ಜನರಿಗೆ 2 ಡೋಸ್ ಲಸಿಕೆ ನೀಡಲಾಗಿದೆ. ಲಸಿಕೆ ಸುರಕ್ಷಿತವಾಗಿದೆ ಮತ್ತು ವೈರಸ್ ವಿರುದ್ಧ ರೋಗನಿರೋಧಕ ಪ್ರತಿಕ್ರಿಯೆಗಳನ್ನು ಉತ್ಪಾದಿಸುತ್ತಿದೆ ಎಂದು ಔಷಧಿ ಕಂಪನಿ ಹೇಳುತ್ತಿದೆ. ಕಂಪನಿಯ ಈ ಹೇಳಿಕೆ ನಂತರ ಷೇರು ಮಾರುಕಟ್ಟೆಯಲ್ಲಿ ಅದರ ಷೇರುಗಳ ಬೆಲೆಯಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ.

ಪ್ರಯೋಗದ ಸಮಯದಲ್ಲಿ ಕಂಪನಿಯು ಆರೋಗ್ಯವಂತ ಸ್ವಯಂಸೇವಕರಿಗೆ ಮಾತ್ರ ಲಸಿಕೆ ನೀಡಿತ್ತು. ದೇಹದಲ್ಲಿ ಕಂಡು ಬರುವ ಪ್ರತಿಕಾಯಗಳನ್ನು ಪ್ರಯೋಗಾಲಯದಲ್ಲಿ  ಪರೀಕ್ಷಿಸಲಾಯಿತು. ಈ ಸಮಯದಲ್ಲಿ ಪ್ರತಿಕಾಯಗಳು ವೈರಸ್ ಬೆಳೆಯುವುದನ್ನು ತಡೆಯಲು ಸಮರ್ಥವಾಗಿವೆ ಎಂಬುದು ಕಂಡುಬಂದಿದೆ. ಎರಡನೇ ಹಂತದಲ್ಲಿ 600 ಜನರ ಮೇಲೆ ಲಸಿಕೆ ಪ್ರಯೋಗ ಮಾಡ್ತಿರುವುದಾಗಿ ಮಾಡರ್ನಾ ಹೇಳಿದೆ. ಜುಲೈನಿಂದ ಮೂರನೇ ಹಂತದ ಲಸಿಕೆ ಪರೀಕ್ಷೆ ಪ್ರಾರಂಭವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...