alex Certify ಸಂದರ್ಶನದ ವೇಳೆ ಯೂಸರ್‌ ನೇಮ್‌ ಕಾರಣಕ್ಕೆ ಪೇಚಿಗೆ ಸಿಲುಕಿದ ಉದ್ಯೋಗಾಕಾಂಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂದರ್ಶನದ ವೇಳೆ ಯೂಸರ್‌ ನೇಮ್‌ ಕಾರಣಕ್ಕೆ ಪೇಚಿಗೆ ಸಿಲುಕಿದ ಉದ್ಯೋಗಾಕಾಂಕ್ಷಿ

ಕೋವಿಡ್-19 ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡುವುದು, ಸಂದರ್ಶನ ನಡೆಸುವುದಂಥ ಕೆಲಸಗಳು ಬಲು ಸವಾಲಿನ ಕೆಲಸ. ಜೂಮ್‌ ಕಾಲ್, ಗೂಗಲ್ ಮೀಟ್ಸ್‌ನಂಥ ಹೊಸ ಅಪ್ಲಿಕೇಶನ್‌ಗಳಿಗೆ ಒಗ್ಗುವುದು ಕೆಲವರಿಗೆ ಇನ್ನೂ ಆಗಿಲ್ಲವಾದ ಕಾರಣ ಏನೇನೋ ಎಡವಟ್ಟುಗಳು ಆಗುತ್ತಿವೆ.

ಜೂಮ್‌ ಮೂಲಕ ಮಾಡಲಾಗುವ ಸಾಮೂಹಿಕ ವಿಡಿಯೋ ಕಾಲಿಂಗ್‌ನಲ್ಲಿ ಆಗುವ ಎಡವಟ್ಟುಗಳಿಂದ ಏನೆಲ್ಲಾ ಪೇಚಿನ ಕೆಲಸಗಳಾಗುತ್ತಿವೆ ಎಂಬ ಬಹಳಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಕೆಲಸ ಅರಸಿ ಸಂದರ್ಶನ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಇಂಥದ್ದೇ ಎಡವಟ್ಟೊಂದು ಆಗಿದೆ.

ಜೂಮ್ ಕಾಲ್ ಮೂಲಕ ಸಂದರ್ಶಕನ ಮುಂದೆ ವಚರ್ಯವಲ್ ಆಗಿ ಕುಳಿತ ಈ ಯುವಕನ ಯೂಸರ್ ‌ನೇಮ್ ಭಿನ್ನವಾಗಿರುವುದು ಆತನ ಭವಿಷ್ಯದ ಬಾಸ್ ಕಣ್ಣಿಗೆ ಬಿದ್ದಿದೆ. ಅರ್ಜಿದಾರ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಸಭ್ಯವಾಗಿಯೇ ಕುಳಿತಿದ್ದರೂ ಸಹ ಆತನ ಸಂದರ್ಶಕನ ಕಣ್ಣು ಎಡವಟ್ಟಾದ ಯೂಸರ್‌ನೇಮ್ ಮೇಲೆಯೇ ಬಿದ್ದಿದೆ.

ಯುವತಿ ಮಾತು ನಂಬಿ ಬೆತ್ತಲಾದ ಯುವಕನಿಗೆ ಬಿಗ್ ಶಾಕ್

ತನ್ನ ಮಡದಿಯೊಂದಿಗೆ ಜೂಮ್ ಕಾಲ್‌ನಲ್ಲಿ ಮಾತನಾಡುವ ವೇಳೆ ’ಬಿಗ್ ಡ್ಯಾಡಿ’ ಎಂದು ತನ್ನ ಯೂಸರ್‌ನೇಮ್ ಇಟ್ಟುಕೊಂಡಿದ್ದ ಅರ್ಜಿದಾರ, ಅದನ್ನು ಬದಲಿಸಲು ಮರೆತಿದ್ದಾನೆ.

ಅದೃಷ್ಟವಶಾತ್‌ ಸಂದರ್ಶಕರು ಈ ವಿಚಾರವನ್ನು ದೊಡ್ಡದು ಮಾಡದೇ ನಕ್ಕು ಸುಮ್ಮನಾಗಿದ್ದಾರೆ. ರೆಡ್ಡಿಟ್‌ನಲ್ಲಿ ಈ ಪ್ರಹಸನವನ್ನು ಅರ್ಜಿದಾರರು ಶೇರ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...