
ಅರ್ಜೆಂಟೀನಾ ರಾಜಧಾನಿ ಬ್ಯೂನಸ್ನ ಸಿಟಿ ಪಾರ್ಕ್ ಪ್ರದೇಶದಲ್ಲಿ ಡಿಯಾಗೋ ಮೊರೆನೋ ಸೈಕಲ್ ಸವಾರಿ ಮಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ಗುಂಡಿಯನ್ನ ಗುರುತಿಸುವಲ್ಲಿ ಡಿಯಾಗೋ ವಿಫಲರಾದ ಹಿನ್ನೆಲೆ ಆಯ ತಪ್ಪಿ ಪಾಪಾಸ್ ಕಳ್ಳಿ ಗಿಡದ ಮೇಲೆ ಬಿದ್ದಿದ್ದಾರೆ.
ಡಿಯಾಗೋ ಮೈ ತುಂಬಾ ಪಾಪಾಸ್ ಕಳ್ಳಿ ಮುಳ್ಳು ಅಂಟಿರೋದನ್ನ ವಿಡಿಯೋದಲ್ಲಿ ನೀವು ನೋಡಬಹುದಾಗಿದೆ. ಹೆಲ್ಮೆಟ್ ಧರಿಸಿದ್ದರಿಂದ ಡಿಯಾಗೋ ಮುಖಕ್ಕೆ ಹಾಗೂ ತಲೆಗೆ ಯಾವುದೇ ಗಾಯಗಳಾಗಿಲ್ಲ. ಡಿಯಾಗೋರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.