ಸಾಮಾಜಿಕ ಜಾಲತಾಣಗಳಲ್ಲಿ ಮಾನವೀಯ ಮೌಲ್ಯಗಳುಳ್ಳ ವಿಡಿಯೋಗಳು ಬೆಳಕಿಗೆ ಬರ್ತಾನೇ ಇರುತ್ತೆ. ಈ ವಿಡಿಯೋಗಳನ್ನ ನೋಡ್ತಿದ್ರೆ ಸಮಾಜದಲ್ಲಿ ಇನ್ನೂ ಮಾನವೀಯತೆ ಅನ್ನೋದು ನೆಲೆಸಿದೆ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತೆ.
ಇದೀಗ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆಲ್ಲುತ್ತಿದೆ. ಟಿಕ್ಟಾಕ್ನಲ್ಲಿ ಮೊದಲು ಶೇರ್ ಮಾಡಲಾದ ವಿಡಿಯೋದಲ್ಲಿ ಮಹಿಳೆಯೊಬ್ಬರು ಮಳೆಯ ನಡುವೆಯೇ ರಸ್ತೆಯಲ್ಲಿ ನಿಂತು ವಾಹನಕ್ಕಾಗಿ ಕಾಯುತ್ತಿದ್ದರು.
ದುರದೃಷ್ಟವಶಾತ್ ಆಕೆಯ ಬಳಿ ಛತ್ರಿಯೂ ಇಲ್ಲದ ಕಾರಣ ಆಕೆ ಮಳೆಯಲ್ಲೇ ನೆನೆಯುವಂತಾಯ್ತು.
ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಆಗಿದ್ದರಿಂದ ವಾಹನಗಳು ನಿಂತಲ್ಲೇ ನಿಂತಿದ್ದವು. ಮಹಿಳೆಯ ಈ ಅವಸ್ಥೆಯನ್ನ ಕಂಡ ವ್ಯಕ್ತಿಯೋರ್ವ ಟ್ರಕ್ನಿಂದ ಇಳಿದು ಆಕೆಗೆ ಛತ್ರಿಯನ್ನ ನೀಡಿದ್ದಾನೆ.
ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋಗೆ ಆಕೆ ಈ ಕ್ಷಣವನ್ನ ಎಂದಿಗೂ ಮರೆಯೋಕೆ ಸಾಧ್ಯವೇ ಇಲ್ಲ ಎಂದು ಶೀರ್ಷಿಕೆ ನೀಡಲಾಗಿದೆ. ಬಳಿಕ ಈ ವಿಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಟ್ರಕ್ ಚಾಲಕನ ಮಾನವೀಯತೆಗೆ ಸಲಾಂ ಎಂದಿದ್ದಾರೆ.
https://www.instagram.com/p/CNvPUQWjXUL/?utm_source=ig_web_copy_link