alex Certify ಕೊರೊನಾದಿಂದ ಪಾರಾಗೋಕೆ ಕಲಾವಿದನಿಂದ ಸಖತ್‌ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಪಾರಾಗೋಕೆ ಕಲಾವಿದನಿಂದ ಸಖತ್‌ ಪ್ಲಾನ್

ಯುರೋಪ್​ನಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್​ ಪ್ರಕರಣಗಳಿಂದ ಪಾರಾಗೋಕೆ ಸರ್ಕಾರಗಳೂ ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿವೆ. ಬೆಲ್ಜಿಯಂನ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಅಲೈನ್ ವರ್ಸ್‌ಚುರೆನ್ ಎಂಬವರು ಕುತ್ತಿಗೆಯ ಸುತ್ತೆಲ್ಲ ಪೋರ್ಟೆಬಲ್​ ಒಯಸಿಸ್​​ ಹಾಕಿಕೊಂಡು ತಿರುಗುವ ಮೂಲಕ ಭಾರೀ ಸುದ್ದಿಯಾಗ್ತಿದ್ದಾರೆ.

ಇದೊಂದು ಮಿನಿ ಗ್ರೀನ್​ ಹೌಸ್ ಆಗಿದ್ದು ಇದರಲ್ಲಿ ಅರೊಮ್ಯಾಟಿಕ್​ ಗಿಡಗಳಿವೆ. ಇವುಗಳ ಸಹಾಯದಿಂದ ಅಲೈನ್​​ ಶುದ್ಧ ಗಾಳಿಯನ್ನ ಉಸಿರಾಡುತ್ತಾರೆ.

61 ವರ್ಷದ ಅಲೈನ್​ 15 ವರ್ಷಗಳ ಹಿಂದೆಯೇ ಈ ಐಡಿಯಾವನ್ನ ಕಂಡುಕೊಂಡಿದ್ದಾರೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಟುನೇಶಿಯಾಸ ಓಯಸ್​ಗಳಿಂದ ಪ್ರೇರಣೆ ಪಡೆದು ಈ ಐಡಿಯಾವನ್ನ ಮಾಡಿದ್ದಾರೆ.

ಕೋವಿಡ್ 19 ತಡೆಯುವ ಸಲುವಾಗಿ ಮುಖವನ್ನ ಮುಚ್ಚಿಕೊಳ್ಳೋದು ಯುರೋಪ್​ನಲ್ಲಿ ಅನಿವಾರ್ಯವಾಗಿರೋದ್ರಿಂದ ಅಲೈನ್​ರ ಈ ಪ್ಲಾನ್​ ಹೆಚ್ಚು ಪ್ರಖ್ಯಾತಿ ಗಳಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...