ಯುರೋಪ್ನಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದ ಪಾರಾಗೋಕೆ ಸರ್ಕಾರಗಳೂ ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿವೆ. ಬೆಲ್ಜಿಯಂನ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಅಲೈನ್ ವರ್ಸ್‌ಚುರೆನ್ ಎಂಬವರು ಕುತ್ತಿಗೆಯ ಸುತ್ತೆಲ್ಲ ಪೋರ್ಟೆಬಲ್ ಒಯಸಿಸ್ ಹಾಕಿಕೊಂಡು ತಿರುಗುವ ಮೂಲಕ ಭಾರೀ ಸುದ್ದಿಯಾಗ್ತಿದ್ದಾರೆ.
ಇದೊಂದು ಮಿನಿ ಗ್ರೀನ್ ಹೌಸ್ ಆಗಿದ್ದು ಇದರಲ್ಲಿ ಅರೊಮ್ಯಾಟಿಕ್ ಗಿಡಗಳಿವೆ. ಇವುಗಳ ಸಹಾಯದಿಂದ ಅಲೈನ್ ಶುದ್ಧ ಗಾಳಿಯನ್ನ ಉಸಿರಾಡುತ್ತಾರೆ.
61 ವರ್ಷದ ಅಲೈನ್ 15 ವರ್ಷಗಳ ಹಿಂದೆಯೇ ಈ ಐಡಿಯಾವನ್ನ ಕಂಡುಕೊಂಡಿದ್ದಾರೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಟುನೇಶಿಯಾಸ ಓಯಸ್ಗಳಿಂದ ಪ್ರೇರಣೆ ಪಡೆದು ಈ ಐಡಿಯಾವನ್ನ ಮಾಡಿದ್ದಾರೆ.
ಕೋವಿಡ್ 19 ತಡೆಯುವ ಸಲುವಾಗಿ ಮುಖವನ್ನ ಮುಚ್ಚಿಕೊಳ್ಳೋದು ಯುರೋಪ್ನಲ್ಲಿ ಅನಿವಾರ್ಯವಾಗಿರೋದ್ರಿಂದ ಅಲೈನ್ರ ಈ ಪ್ಲಾನ್ ಹೆಚ್ಚು ಪ್ರಖ್ಯಾತಿ ಗಳಿಸುತ್ತಿದೆ.