ಕಚೇರಿಯ ಮೀಟಿಂಗ್ ಗಳಲ್ಲಿ, ಇತ್ತೀಚಿನ ದಿನದಲ್ಲಿ ಕೊರೋನಾದಿಂದ ಮನೆಯಿಂದಲೇ ಮಾಡುವ ಝೂಮ್ ಮೀಟಿಂಗ್‌ಗಳ ನಡುವೆ ಫೋನ್ ರಿಂಗಿಸುವುದು ಸಹಜ. ಆದರೆ ಸಂಸತ್‌ನಲ್ಲಿ ಭಾಷಣ ಮಾಡುವಾಗ ಫೋನ್ ರಿಂಗ್ ಆದರೆ ಹೇಗಿರಬೇಡ? ಈ ರೀತಿಯ ನೈಜ ಘಟನೆ ಇದೀಗ ವೈರಲ್ ಆಗಿದೆ.
ಹೌದು, ಈ ರೀತಿಯ ಘಟನೆ ಬ್ರಿಟಿಷ್ ಸಂಸತ್‌ನಲ್ಲಿ ನಡೆದಿದ್ದು, ಕ್ಲೌಡಿಯಾ ವೆಬ್ಬೆ ಅವರು ಹೌಸ್ ಆಫ್ ಕಾಮನ್ಸ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹೇಳುತ್ತಿರುವಾಗ ಅವರ ಮೊಬೈಲ್ ಜೋರಾಗಿ ರಿಂಗ್ ಆಗಿದೆ, ಕೂಡಲೇ ಅದನ್ನು ಸೈಲೆಂಟ್‌ಗೆ ಹಾಕಲು ಮುಂದಾಗಿದ್ದು ಈ ವೇಳೆ ಪುನಃ ರಿಂಗಿಣಿಸಲು ಶುರುವಾಗಿದೆ. ಅಂತಿಮವಾಗಿ ಮೊಬೈಲ್‌ನ್ನು ಸೈಲೆಂಟ್ ಮೋಡ್‌ಗೆ ಹಾಕಿದರೂ, ಭಾಷಣದ ಮಧ್ಯೆ ಎರಗಿದ ಈ ಗೊಂದಲ ಅವರನ್ನು ಕೊಂಚ ವಿಚಲಿತರನ್ನಾಗಿ ಮಾಡಿದೆ.
ಈ ಘಟನೆ ನಡೆಯುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ಪರಿಸ್ಥಿತಿಯನ್ನು ಭಿನ್ನವಾಗಿ ಬಣ್ಣಿಸಿದ್ದಾರೆ. ಕೆಲವರು ತಮಗೆ ಆದ ಅನುಭವವನ್ನು ಹಂಚಿಕೊಂಡರೆ, ಇನ್ನು ಕೆಲವರು ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿರಬೇಕು ಎಂದು ಸಲಹೆ ನೀಡಿದ್ದಾರೆ. ಈ ವಿಡಿಯೊವನ್ನು 1.25 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾವಿರಾರು ಮಂದಿ ಲೈಕ್ ಹಾಗೂ ಕಾಮೆಂಟ್ ಮಾಡಿದ್ದಾರೆ.