alex Certify ಸಂಸತ್‌ ನಲ್ಲಿ ಮಾತನಾಡುವಾಗಲೇ ಮುಜುಗರಕ್ಕೊಳಗಾದ ಸಂಸದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸತ್‌ ನಲ್ಲಿ ಮಾತನಾಡುವಾಗಲೇ ಮುಜುಗರಕ್ಕೊಳಗಾದ ಸಂಸದೆ…!

ಕಚೇರಿಯ ಮೀಟಿಂಗ್‌ ಗಳಲ್ಲಿ, ಇತ್ತೀಚಿನ ದಿನದಲ್ಲಿ ಕೊರೋನಾದಿಂದ ಮನೆಯಿಂದಲೇ ಮಾಡುವ ಝೂಮ್‌ ಮೀಟಿಂಗ್‌ಗಳ ನಡುವೆ ಫೋನ್‌ ರಿಂಗಿಸುವುದು ಸಹಜ. ಆದರೆ ಸಂಸತ್‌ನಲ್ಲಿ ಭಾಷಣ ಮಾಡುವಾಗ ಫೋನ್‌ ರಿಂಗ್‌ ಆದರೆ ಹೇಗಿರಬೇಡ? ಈ ರೀತಿಯ ನೈಜ ಘಟನೆ ಇದೀಗ ವೈರಲ್‌ ಆಗಿದೆ.

ಹೌದು, ಈ ರೀತಿಯ ಘಟನೆ ಬ್ರಿಟಿಷ್‌ ಸಂಸತ್‌ನಲ್ಲಿ ನಡೆದಿದ್ದು, ಕ್ಲೌಡಿಯಾ ವೆಬ್ಬೆ ಅವರು ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹೇಳುತ್ತಿರುವಾಗ ಅವರ ಮೊಬೈಲ್‌ ಜೋರಾಗಿ ರಿಂಗ್‌ ಆಗಿದೆ, ಕೂಡಲೇ ಅದನ್ನು ಸೈಲೆಂಟ್‌ಗೆ ಹಾಕಲು ಮುಂದಾಗಿದ್ದು ಈ ವೇಳೆ ಪುನಃ ರಿಂಗಿಣಿಸಲು ಶುರುವಾಗಿದೆ. ಅಂತಿಮವಾಗಿ ಮೊಬೈಲ್‌ನ್ನು ಸೈಲೆಂಟ್‌ ಮೋಡ್‌ಗೆ ಹಾಕಿದರೂ, ಭಾಷಣದ ಮಧ್ಯೆ ಎರಗಿದ ಈ ಗೊಂದಲ ಅವರನ್ನು ಕೊಂಚ ವಿಚಲಿತರನ್ನಾಗಿ ಮಾಡಿದೆ.

ಈ ಘಟನೆ ನಡೆಯುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್‌ ಆಗಿದ್ದು, ನೆಟ್ಟಿಗರು ಆಕೆಯ ಪರಿಸ್ಥಿತಿಯನ್ನು ಭಿನ್ನವಾಗಿ ಬಣ್ಣಿಸಿದ್ದಾರೆ. ಕೆಲವರು ತಮಗೆ ಆದ ಅನುಭವವನ್ನು ಹಂಚಿಕೊಂಡರೆ, ಇನ್ನು ಕೆಲವರು ಮೊಬೈಲ್‌ ಸೈಲೆಂಟ್‌ ಮೋಡ್‌ನಲ್ಲಿರಬೇಕು ಎಂದು ಸಲಹೆ ನೀಡಿದ್ದಾರೆ. ಈ ವಿಡಿಯೊವನ್ನು 1.25 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾವಿರಾರು ಮಂದಿ ಲೈಕ್‌ ಹಾಗೂ ಕಾಮೆಂಟ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...