alex Certify ಶಾಕಿಂಗ್​: ಈ ಊರಿನ ರಸ್ತೆ ತುಂಬೆಲ್ಲಾ ಹರಿದಿದೆ ರಕ್ತದ ಮಾದರಿಯ ನೀರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಈ ಊರಿನ ರಸ್ತೆ ತುಂಬೆಲ್ಲಾ ಹರಿದಿದೆ ರಕ್ತದ ಮಾದರಿಯ ನೀರು….!

ಇಂಡೋನೇಷಿಯಾದ ಪೆಕಾಲೊಂಗನ್​​ ಊರಿನ ರಸ್ತೆಗಳ ತುಂಬೆಲ್ಲ ಏಕಾ ಏಕಿ ರಕ್ತದ ರೀತಿಯ ನೀರು ಹರಿದಿದ್ದು ಇದನ್ನ ಕಂಡ ಜನತೆ ಶಾಕ್​ ಆಗಿದ್ದಾರೆ.
ಕೆಂಪು ಬಣ್ಣದ ನೀರನ್ನ ನೋಡಿದ ನೆಟ್ಟಿಗರು ಈ ಊರಿನಲ್ಲೇನೋ ಆಗಬಾರದ್ದು ಆಗಿದೆ ಎಂದು ಶಾಕ್​ ಆಗಿದ್ದಾರೆ. ಆದರೆ ಬಳಿಕ ಇದು ಬಟ್ಟೆ ತಯಾರಕ ಕಾರ್ಖಾನೆಯಿಂದ ಹರಿದು ಬಂದ ನೀರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ಊರು ಬಟ್ಟೆ ತಯಾರಿಕೆಗೆ ಹೆಸರುವಾಸಿಯಾಗಿದೆ. ಹೀಗಾಗಿ ಪ್ರವಾಹ ಪರಿಸ್ಥಿತಿ ಉಂಟಾದ ಏರಿಯಾಗಳಲ್ಲಿ ಬಟ್ಟೆ ತಯಾರಕ ಕಂಪನಿಗಳೇ ಜಾಸ್ತಿ ಇದ್ದ ಕಾರಣ ನೀರಿನ ಬಣ್ಣದಲ್ಲಿ ಈ ರೀತಿಯ ಬದಲಾವಣೆ ಕಂಡು ಬಂದಿದೆ. ಪೆಕಾಲೊಂಗನ್​ ಒಂದು ಹಳ್ಳಿಯಾಗಿದ್ದು ಈ ಊರಿನಲ್ಲಿ ಬಟ್ಟೆ ತಯಾರು ಮಾಡಲು ಸಾಮಾನ್ಯ ಬಣ್ಣಗಳನ್ನ ಬಳಕೆ ಮಾಡುವ ಬದಲು ಮೇಣಗಳನ್ನ ಬಳಸಲಾಗುತ್ತದೆ.

— Alex Journey (@alexjourneyID) February 6, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...