
ಕೆಂಪು ಬಣ್ಣದ ನೀರನ್ನ ನೋಡಿದ ನೆಟ್ಟಿಗರು ಈ ಊರಿನಲ್ಲೇನೋ ಆಗಬಾರದ್ದು ಆಗಿದೆ ಎಂದು ಶಾಕ್ ಆಗಿದ್ದಾರೆ. ಆದರೆ ಬಳಿಕ ಇದು ಬಟ್ಟೆ ತಯಾರಕ ಕಾರ್ಖಾನೆಯಿಂದ ಹರಿದು ಬಂದ ನೀರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಊರು ಬಟ್ಟೆ ತಯಾರಿಕೆಗೆ ಹೆಸರುವಾಸಿಯಾಗಿದೆ. ಹೀಗಾಗಿ ಪ್ರವಾಹ ಪರಿಸ್ಥಿತಿ ಉಂಟಾದ ಏರಿಯಾಗಳಲ್ಲಿ ಬಟ್ಟೆ ತಯಾರಕ ಕಂಪನಿಗಳೇ ಜಾಸ್ತಿ ಇದ್ದ ಕಾರಣ ನೀರಿನ ಬಣ್ಣದಲ್ಲಿ ಈ ರೀತಿಯ ಬದಲಾವಣೆ ಕಂಡು ಬಂದಿದೆ. ಪೆಕಾಲೊಂಗನ್ ಒಂದು ಹಳ್ಳಿಯಾಗಿದ್ದು ಈ ಊರಿನಲ್ಲಿ ಬಟ್ಟೆ ತಯಾರು ಮಾಡಲು ಸಾಮಾನ್ಯ ಬಣ್ಣಗಳನ್ನ ಬಳಕೆ ಮಾಡುವ ಬದಲು ಮೇಣಗಳನ್ನ ಬಳಸಲಾಗುತ್ತದೆ.