
ಇದೇ ರೀತಿ ಪ್ರಯತ್ನವೊಂದರಲ್ಲಿ ಆಸ್ಪತ್ರೆ ಬೆಡ್ ಮೇಲೆ ರೋಗಿಯೊಬ್ಬ ಮಲಗಿದ ರೀತಿಯಲ್ಲಿ ಕೇಕ್ ಒಂದನ್ನ ತಯಾರಿಸಲಾಗಿದ್ದು ಇದನ್ನ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ವ್ಯಕ್ತಿಯ ಕಾಲನ್ನ ತುಂಡರಿಸಲಾಗಿದ್ದರೂ ರೋಗಿ ನಗುತ್ತಿರುವ ರೀತಿಯಲ್ಲಿ ಇದ್ದ ಕೇಕ್ನ್ನು ಕಂಡ ನೆಟ್ಟಿಗರು ಇದು ನಿಜವಾದ ರೋಗಿಯೇ ಇರಬೇಕು ಎಂದು ಭಾವಿಸಿದ್ದಾರೆ. ಬಳಿಕ ಇದು ಕೇಕ್ ಎಂದು ತಿಳಿದಿದೆ.
ಈ ಕೇಕ್ನ್ನು ದಿ ಬೇಕ್ ಕಿಂಗ್ ಖ್ಯಾತಿಯ ಬ್ರಿಟಿಷ್ ಬೇಕರ್ ಬೆನ್ ಕುಲ್ಲೆನ್ ಎಂಬವರು ವಿನ್ಯಾಸಗೊಳಿಸಿದ್ದಾರೆ.
ನೆಚ್ಚಿನ ಹೋಟೆಲ್ ಸಿಬ್ಬಂದಿಗೆ ದಂಪತಿಯಿಂದ ಭಾರೀ ಮೊತ್ತದ ಟಿಪ್ಸ್
ಕುಲ್ಲೆನ್ ತಮ್ಮ ವೈವಿಧ್ಯಮಯ ಕೇಕ್ ವಿನ್ಯಾಸಗಳ ಮೂಲಕವೇ ಸುದ್ದಿಯಾಗ್ತಿರ್ತಾರೆ. ಕಳೆದ ವರ್ಷ ಕೂಡ ಮನುಷ್ಯ ಆಕೃತಿಯ ವೆನಿಲ್ಲಾ ಕೇಕ್ ತಯಾರಿಸಿದ್ದರು . ಆ ಕೇಕ್ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿತ್ತು.