alex Certify ನೆಚ್ಚಿನ ಹೋಟೆಲ್‌ ಸಿಬ್ಬಂದಿಗೆ ದಂಪತಿಯಿಂದ ಭಾರೀ ಮೊತ್ತದ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ಹೋಟೆಲ್‌ ಸಿಬ್ಬಂದಿಗೆ ದಂಪತಿಯಿಂದ ಭಾರೀ ಮೊತ್ತದ ಟಿಪ್ಸ್

ಸಾಮಾನ್ಯವಾಗಿ ಎಲ್ಲರಿಗೂ ಒಂದೊಂದು ಹೋಟೆಲ್​ಗಳು ಫೇವರಿಟ್ ಆಗಿರುತ್ತೆ. ಕಾಲೇಜು ಟೈಂ ಅಲ್ಲೋ…..ಇಲ್ಲ ಪ್ರೀತಿಸಿದವರ ಜೊತೆಯೋ ಹೀಗೆ ಏನಾದರೊಂದು ನೆನಪಿನ ಬುತ್ತಿಯನ್ನ ಆ ಹೋಟೆಲ್​ಗಳೋ ಇಲ್ಲ ರೆಸ್ಟಾರೆಂಟ್​ಗಳು ಹೊಂದಿರುತ್ತವೆ.

ಅದೇ ರೀತಿ ಚಿಕಾಗೋದ ದಂಪತಿ ಕೊರೊನಾದಂತಹ ಕಷ್ಟದ ಸಂದರ್ಭದಲ್ಲೂ ತಮ್ಮ ನೆಚ್ಚಿನ ಹೋಟೆಲ್​ ಚೆನ್ನಾಗಿ ನಡೆದುಕೊಂಡು ಹೋಗಲಿ ಎಂದು ಬರೋಬ್ಬರಿ 1,45,534 ರೂಪಾಯಿಗಳನ್ನ ಟಿಪ್ಸ್ ರೂಪದಲ್ಲಿ ನೀಡಿದ್ದು ಪ್ರೇಮಿಗಳ ದಿನದಂದು ಈ ರಶೀದಿಯ ಫೋಟೋವನ್ನ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ಅಮೆರಿಕದ ಚಿಕಾಗೋದಲ್ಲಿ ದಂಪತಿ 9993.09 ರೂಪಾಯಿಯ ಆಹಾರಕ್ಕೆ 1,45,534 ರೂಪಾಯಿಗಳನ್ನ ಟಿಪ್ಸ್ ರೂಪದಲ್ಲಿ ನೀಡಿದ್ದಾರೆ. ಮಾತ್ರವಲ್ಲದೇ ರಶೀದಿಯ ಮೇಲೆ 20 ವರ್ಷಗಳ ಉತ್ತಮ ನೆನಪು, ಅತ್ಯುತ್ತಮ ಆಹಾರ ಹಾಗೂ ಸೇವೆಗಳನ್ನ ನೀಡಿದ್ದಕ್ಕಾಗಿ ರೆಸ್ಟಾರೆಂಟ್​​ಗೆ ನಮ್ಮ ಧನ್ಯವಾದ ಎಂದು ಬರೆದಿದ್ದಾರೆ.

ಬರೋಬ್ಬರಿ 20 ವರ್ಷಗಳ ಹಿಂದೆ ಫೆಬ್ರವರಿ 12ನೇ ತಾರೀಖಿನಂದು ಈ ದಂಪತಿ ಇದೇ ರೆಸ್ಟಾರೆಂಟ್​ನಲ್ಲಿ ಭೇಟಿಯಾಗಿದ್ದರು. ಇದಾದ ಬಳಿಕ ಪ್ರತಿವರ್ಷ ಈ ದಂಪತಿ ಇದೇ ಸಮಯ ಹಾಗೂ ಇದೇ ದಿನಾಂಕಕ್ಕೆ ಸರಿಯಾಗಿ ಈ ಹೋಟೆಲ್​ಗೆ ಭೇಟಿ ನೀಡುತ್ತಿದ್ದರು. ಇದೀಗ ಇಷ್ಟು ದೊಡ್ಡ ಮೊತ್ತದ ಟಿಪ್ಸ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇನ್ನು ಹೋಟೆಲ್​ ಮಾಲೀಕರು ಕೂಡ ದಂಪತಿ ಔದಾರ್ಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಕಷ್ಟದ ಸಮಯದಲ್ಲಿ ನೀವು ನೀಡಿರುವ ಉಡುಗೊರೆ ನಮ್ಮ ಸಿಬ್ಬಂದಿಯ ಉತ್ಸಾಹವನ್ನ ಹೆಚ್ಚು ಮಾಡಿದೆ. ನಿಮಗೆ ಎಂದಿಗೂ ಕೃತಜ್ಞರಾಗಿ ಇರಬೇಕು ಎಂದು ಹೇಳಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...