alex Certify ಮರಿಯಾನೆಯ ಪ್ರಾಣ ಕಾಪಾಡಿದ ಥೈಲ್ಯಾಂಡ್ ರಕ್ಷಣಾ ಸಿಬ್ಬಂದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿಯಾನೆಯ ಪ್ರಾಣ ಕಾಪಾಡಿದ ಥೈಲ್ಯಾಂಡ್ ರಕ್ಷಣಾ ಸಿಬ್ಬಂದಿ…!

ಥೈಲಾಂಡ್​ನ ರಕ್ಷಣಾ ಇಲಾಖೆ ಸಿಬ್ಬಂದಿ ನಡುರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆನೆ ಮರಿಯ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ.

ಥೈಲಾಂಡ್​ ಪೂರ್ವ ಪ್ರಾಂತ್ಯದ ಚಂತಬುರಿಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಆನೆ ಮರಿಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಆನೆ ಮರಿ ಪ್ರಜ್ಞೆ ತಪ್ಪಿ ನಡುರಸ್ತೆಯಲ್ಲೇ ಬಿದ್ದಿತ್ತು. ಇದನ್ನ ಗಮನಿಸಿದ ರಕ್ಷಣಾ ಸಿಬ್ಬಂದಿ ತಾವೇ ಆನೆ ಮರಿಯ ಎದೆಯ ಬಳಿ ಜೋರಾಗಿ ತಳ್ಳುವುದರ ಮೂಲಕ ಆನೆ ಮರಿಗೆ ಹೊಸ ಜನ್ಮ ನೀಡಿದ್ದಾರೆ. ಬೈಕ್​ನಿಂದ ಬಿದ್ದಿದ್ದ ಸವಾರನಿಗೆ ಶುಶ್ರೂಷೆ ಮಾಡಿದ್ದಾರೆ.

ರಕ್ಷಣಾ ಸಿಬ್ಬಂದಿಯಾಗಿ ಕೇವಲ ಮನುಷ್ಯರ ಜೀವನವನ್ನ ಕಾಪಾಡುತ್ತಿದ್ದ ಈ ವ್ಯಕ್ತಿ ಇದೀಗ ಪ್ರಾಣಿ ಜೀವವನ್ನೂ ಕಾಪಾಡುವ ಮೂಲಕ ಸಾಮಾಜಿಕ ಜಾಲತಾಣದ ಹಿರೋ ಆಗಿ ಮೆರೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...