ಎರಡು ಶಿಶ್ನ ಹಾಗೂ ಎರಡು ಮೂತ್ರನಾಳ ಹೊಂದಿದ ವಿಚಿತ್ರ ಮಗುವೊಂದು ಈಜಿಪ್ಟ್ನ ಅಸ್ಸಿಯಟ್ ಯೂನಿವರ್ಸಿಟಿಯ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದೆ. ಕಾಡಲ್ ಡೂಪ್ಲಿಕೇಶನ್ ಸಿಂಡ್ರೋಮ್ನಿಂದ ಈ ಮಗು ಬಳಲುತ್ತಿದೆ ಎನ್ನಲಾಗಿದೆ.
ಅವಳಿ ಮಕ್ಕಳು ಸಂಪೂರ್ಣ ಬೇರ್ಪಡುವಲ್ಲಿ ವಿಫಲರಾದ ಸಂದರ್ಭದಲ್ಲಿ ಈ ರೀತಿ ಸಿಂಡ್ರೋಮ್ ಉಂಟಾಗುತ್ತೆ. ಈ ರೀತಿಯ ಸಮಸ್ಯೆ ಇರುವ ಮಗು ಅಪೂರ್ಣ ಗುದದ್ವಾರ, 2 ಮೂತ್ರಪಿಂಡ , 2 ಶಿಶ್ನ ಹೀಗೆ ವಿಚಿತ್ರ ದೇಹ ರಚನೆ ಹೊಂದುತ್ತವೆ ಅಂತಾ ವೈದ್ಯರು ತಿಳಿಸಿದ್ದಾರೆ.
ಈ ಮಗು ಜನಿಸುವಾಗ 2.6 ಕೆಜಿ ತೂಕ ಹೊಂದಿತ್ತು. ಹಾಗೆ ಈ ಮಗು 16 ತಿಂಗಳು ಪೂರೈಸುತ್ತಿದ್ದಂತೆಯೇ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ. ‘