alex Certify ಸೋಂಕಿತ ಗರ್ಭಿಣಿಗೆ ಜನಿಸಿದ ಮಗುವಿಗೂ ಬರುತ್ತಾ ಕೊರೊನಾ…? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕಿತ ಗರ್ಭಿಣಿಗೆ ಜನಿಸಿದ ಮಗುವಿಗೂ ಬರುತ್ತಾ ಕೊರೊನಾ…? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್​ 19 ಸೋಂಕಿಗೊಳಗಾದ ಗರ್ಭಿಣಿಯರಿಗೆ ಜನಿಸಿದ ಮಕ್ಕಳು ಕೊರೊನಾ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳನ್ನ ಹೊಂದಿರುತ್ತಾರೆ ಎಂದು ಸಿಂಗಾಪುರದಲ್ಲಿ ನಡೆದ ಅಧ್ಯಯನವೊಂದು ಹೇಳಿದೆ.

ಕೇವಲ 16 ಮಂದಿ ಗರ್ಭಿಣಿಯರ ಮೇಲೆ ನಡೆಸಲಾದ ಸಣ್ಣ ಪ್ರಮಾಣದ ಅಧ್ಯಯನದಲ್ಲಿ ತಾಯಿಯಿಂದ ಮಗುವಿಗೆ ಕೊರೊನಾ ಹರಡಿದ ಬಗ್ಗೆ ಯಾವುದೇ ಪುರಾವೆಗಳು ದೊರಕಿಲ್ಲ.

ಇನ್ನು ಇದೇ ವಿಚಾರವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ವೈರಸ್​​ಗೆ ಒಳಗಾದ ಗರ್ಭಿಣಿಯರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತೆ. ಆದರೆ ಮಗು ಹಾಗೂ ತಾಯಿಯ ನಡುವೆ ವೈರಸ್​ ವರ್ಗವಣೆಯಾಗುತ್ತಾ ಅನ್ನೋದರ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲಿಯವರೆಗೂ ಲಭ್ಯವಾಗಿಲ್ಲ ಎಂದೇ ಹೇಳಿದೆ.

ಅಧ್ಯಯನದಿಂದ ಬಂದ ಫಲಿತಾಂಶದಿಂದ ಧೈರ್ಯ ಹೆಚ್ಚಾಗಿದೆ ಎಂದು ಸಿಂಗಾಪುರದ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರ ತಂಡ ಹೇಳಿಕೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...