ಕೋವಿಡ್ 19 ಸೋಂಕಿಗೊಳಗಾದ ಗರ್ಭಿಣಿಯರಿಗೆ ಜನಿಸಿದ ಮಕ್ಕಳು ಕೊರೊನಾ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳನ್ನ ಹೊಂದಿರುತ್ತಾರೆ ಎಂದು ಸಿಂಗಾಪುರದಲ್ಲಿ ನಡೆದ ಅಧ್ಯಯನವೊಂದು ಹೇಳಿದೆ.
ಕೇವಲ 16 ಮಂದಿ ಗರ್ಭಿಣಿಯರ ಮೇಲೆ ನಡೆಸಲಾದ ಸಣ್ಣ ಪ್ರಮಾಣದ ಅಧ್ಯಯನದಲ್ಲಿ ತಾಯಿಯಿಂದ ಮಗುವಿಗೆ ಕೊರೊನಾ ಹರಡಿದ ಬಗ್ಗೆ ಯಾವುದೇ ಪುರಾವೆಗಳು ದೊರಕಿಲ್ಲ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ವೈರಸ್ಗೆ ಒಳಗಾದ ಗರ್ಭಿಣಿಯರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತೆ. ಆದರೆ ಮಗು ಹಾಗೂ ತಾಯಿಯ ನಡುವೆ ವೈರಸ್ ವರ್ಗವಣೆಯಾಗುತ್ತಾ ಅನ್ನೋದರ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲಿಯವರೆಗೂ ಲಭ್ಯವಾಗಿಲ್ಲ ಎಂದೇ ಹೇಳಿದೆ.
ಅಧ್ಯಯನದಿಂದ ಬಂದ ಫಲಿತಾಂಶದಿಂದ ಧೈರ್ಯ ಹೆಚ್ಚಾಗಿದೆ ಎಂದು ಸಿಂಗಾಪುರದ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರ ತಂಡ ಹೇಳಿಕೆ ನೀಡಿದೆ.