alex Certify ಹೆದ್ದಾರಿ ಮೇಲೆ ಬಂದಿಳಿದ ವಿಮಾನ…! ಬೆಚ್ಚಿಬಿದ್ದ ವಾಹನ ಸವಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆದ್ದಾರಿ ಮೇಲೆ ಬಂದಿಳಿದ ವಿಮಾನ…! ಬೆಚ್ಚಿಬಿದ್ದ ವಾಹನ ಸವಾರರು

ಮಿನ್ನೆಸೋಟದಲ್ಲಿ ಹೆದ್ದಾರಿ ಮೇಲೆಯೇ ತುರ್ತು ಭೂಸ್ಪರ್ಶ ಮಾಡಿದ ಸಣ್ಣ ವಿಮಾನದ ಪೈಲಟ್​​ನ್ನ ಅಮೆರಿಕ ಏರೋಬೇಟಿಕ್ಸ್ ಫ್ಲೈಯಿಂಗ್​ ಟೀಂ ಪ್ರಶಸ್ತಿ ವಿಜೇತ ಎಂದು ಗುರುತಿಸಲಾಗಿದೆ.

ಸಿಂಗಲ್​ ಇಂಜಿನ್​ ಹೊಂದಿದ್ದ ಬೆಲ್ಲಂಕಾ ವೈಕಿಂಗ್​ ವಿಮಾನವು ಹೆದ್ದಾರಿಯಲ್ಲಿ ಲ್ಯಾಂಡಿಂಗ್ ಆದ​ ವೇಳೆ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಬುಧವಾರ ರಾತ್ರಿ ಸೇಂಟ್​ ಪಾಲ್​​ ಉಪನಗರ ಅರ್ಡೆನ್​​ ಪರ್ವತನವನ್ನ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ ಇಬ್ಬರಿದ್ದರು ಎನ್ನಲಾಗಿದ್ದು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಇಲ್ಲವೇ ಗಾಯಗಳು ವರದಿ ಆಗಿಲ್ಲ.

ಪೈಲಟ್​ನ್ನು ಮಿನ್ನಿಯಾಪೊಲೀಸ್​ ನಿವಾಸಿ 52 ವರ್ಷದ ಕ್ರೇಗ್​ ಗಿಫೋರ್ಡ್​ ಎಂದು ಗುರುತಿಸಲಾಗಿದೆ. 2017ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಕಂಚಿನ ಪದಕ ವಿಜೇತ ಅನ್​​ಲಿಮಿಟೆಡ್​​ ಏರ್​​ಬ್ಯಾಟಿಕ್​ ತಂಡದಲ್ಲಿ 2017 ಹಾಗೂ 2019ರಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಯನ್ನ ಪ್ರತಿನಿಧಿಸಿದ್ದಾರೆ ಎಂದು ಪ್ರಾಯೋಗಿಕ ವಿಮಾನ ಸಂಘದ ವಕ್ತಾರ ಡಿಕ್​ ನ್ಯಾಪಿನ್ಸ್ಕಿ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...