ಸ್ಟ್ರಿಪ್ ಕ್ಲಬ್ಗೆ ಹೇಗಾದರೂ ಮಾಡಿ ಎಂಟ್ರಿ ಕೊಡಬೇಕು ಅಂತಾ ಪ್ಲಾನ್ ಮಾಡಿದ 20 ವರ್ಷದ ಯುವಕ ಡ್ರೈನೇಜ್ ಪಂಪ್ ಮೂಲಕ ಕಟ್ಟಡ ಏರಲು ಹೋಗಿ ಆಯತಪ್ಪಿ ಬಿದ್ದ ಪರಿಣಾಮ ಕೈ ಮುರಿದುಕೊಂಡಿದ್ದಾನೆ.
ಯುವಕ ಸೋಮವಾರ ಮುಂಜಾನೆ ಸ್ಟ್ರಿಪ್ ಕ್ಲ್ಬ್ ಗೋಡೆಯನ್ನ ಅಳೆಯಲು ಯತ್ನಿಸಿದ್ದಾನೆ. ಆಸ್ಟ್ರೇಲಿಯಾದ ಅಡಿಲೇಡ್ನ ಹಿಂಡ್ಲಿ ಬೀದಿಯಲ್ಲಿರುವ ಸ್ಟ್ರಿಪ್ ಕ್ಲಬ್ಗೆ ಎಂಟ್ರಿ ಕೊಡಲೇಬೇಕು ಎಂದು ಪ್ಲಾನ್ ಮಾಡಿ ಸುಮಾರು 9 ಅಡಿ ಎತ್ತರದಿಂದ ಆಯತಪ್ಪಿ ಬಿದ್ದಿದ್ದಾನೆ. ಇದರಿಂದ ಆತನ ತೋಳು ತುಂಡಾಗಿದೆ.
ಅಲ್ಲೇ ರಸ್ತೆಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಈ ವಿಡಿಯೋವನ್ನ ಚಿತ್ರೀಕರಿಸಿದ್ದಾನೆ. ಇದರಲ್ಲಿ ಆತ ಆಯತಪ್ಪಿ ಬೀಳೋದನ್ನ ನೋಡಬಹುದಾಗಿದೆ. ಈತನನ್ನ ರಾಯಲ್ ಅಡಿಲೇಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.