ಭಾರತದ ಕೋವಿಡ್ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ಆಸ್ಟ್ರೇಲಿಯಾ ವಿವಿಯಲ್ಲಿ ಬೆಳಗಿದ ತ್ರಿವರ್ಣ ಧ್ವಜ 15-05-2021 3:23PM IST / No Comments / Posted In: Latest News, International ಕೊರೊನಾ 2ನೆ ಅಲೆಯ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈಗಾಗಲೇ ವಿಶ್ವದ ಸಾಕಷ್ಟು ರಾಷ್ಟ್ರಗಳು ಭಾರತದ ಈ ಹೋರಾಟಕ್ಕೆ ಸಾಥ್ ನೀಡಿರುವ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಕೂಡ ತನ್ನ ಬೆಂಬಲವನ್ನ ವ್ಯಕ್ತಪಡಿಸಿದೆ. ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಯುಎನ್ಎಸ್ಡಬ್ಲೂದ ಮುಖ್ಯ ಲೈಬ್ರರಿ ಟವರ್ನಲ್ಲಿ ತ್ರಿವರ್ಣ ಧ್ವಜದ ಬಣ್ಣದ ದೀಪಗಳನ್ನ ಬೆಳಗುವ ಮೂಲಕ ಭಾರತೀಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರು ಮತ್ತು ವಿಶ್ವದಲ್ಲಿ ಕೋವಿಡ್ನಿಂದ ಬಳಲುತ್ತಿರುವವರಿಗೆ ಬೆಂಬಲ ಸೂಚಿಸಿದೆ. ಈ ಫೋಟೋವನ್ನ ಟ್ವಿಟರ್ನಲ್ಲಿ ಆಸ್ಟ್ರೇಲಿಯಾ ಯುನಿವರ್ಸಿಟಿ ಶೇರ್ ಮಾಡಿದೆ. ಈ ಫೋಟೋದಲ್ಲಿ ಕಟ್ಟಡವನ್ನ ತ್ರಿವರ್ಣ ದೀಪದಲ್ಲಿ ಬೆಳಗುತ್ತಿರೋದ್ರ ಜೊತೆಗೆ ಕೊರೊನಾದಿಂದ ಬಳಲುತ್ತಿರುವ ಭಾರತ ಸೇರಿದಂತೆ ಎಲ್ಲರೂ ಸದೃಢವಾಗಿರಿ ಎಂದು ಬರೆದಿರೋದನ್ನ ಕಾಣಬಹುದಾಗಿದೆ. ನಮ್ಮ ಭಾರತೀಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರು ಮತ್ತು ವಿಶ್ವದಲ್ಲಿ ಕೊರೊನಾದಿಂದ ತತ್ತರಿಸಿರುವ ಎಲ್ಲರಿಗೂ ಬೆಂಬಲ ಸೂಚಿಸುವ ಸಲುವಾಗಿ ನಮ್ಮ ಲೈಬ್ರರಿ ಟವರ್ನಲ್ಲಿ ತ್ರಿವರ್ಣ ದೀಪಗಳನ್ನ ಬೆಳಗಿದ್ದೇವೆ. ನೀವೆಲ್ಲರೂ ಸುರಕ್ಷಿತವಾಗಿ, ಆರೋಗ್ಯವಂತರಾಗಿ, ಸದೃಢರಾಗಿ ಇರುತ್ತೀರಾ ಎಂದು ಭಾವಿಸಿದ್ದೇವೆ ಎಂದು ಟ್ವಿಟರ್ನಲ್ಲಿ ಬರೆಯಲಾಗಿದೆ. ಕಳೆದ ತಿಂಗಳು ವಿಶ್ವದ ಅತ್ಯಂತ ಉದ್ದದ ಕಟ್ಟಡ ಬುರ್ಜ್ ಖಲೀಫಾದಲ್ಲಿ ತ್ರಿವರ್ಣ ದೀಪವನ್ನ ಬೆಳಗುವ ಮೂಲಕ ಭಾರತಕ್ಕೆ ಕೋವಿಡ್ ಹೋರಾಟಕ್ಕೆ ಬೆಂಬಲ ನೀಡಿತ್ತು.