ಕೆಲ ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದ ಸಿಡ್ನಿ ಮೂಲದ ದಂಪತಿ ಗಂಡು ಮಗುವೊಂದರ ಪೋಷಕರಾದರು. ಆ ಮಗುವಿಗೆ ಮುದ್ದಾದ ಹೆಸರನ್ನೂ ಇಟ್ಟಿದ್ದಾರೆ. ಆದರೆ ಈ ಮಗುವಿನ ಹೆಸರಿನ ಮೂಲಕವೇ ಇದೀಗ ಈ ದಂಪತಿ ಟಾಕ್ ಆಫ್ ದ ಟೌನ್ ಆಗಿದ್ದಾರೆ.
ಕ್ಲೆಮೆಂಟೈನ್ ಓಲ್ಡ್ಫೀಲ್ಡ್ ಹಾಗೂ ಆಂಥೋನಿ ಲಾಟ್ ತಮ್ಮ ಮಗುವಿಗೆ ಡೊಮಿನಿಕ್ ಜೂಲಿಯನ್ ಲಾಟ್ ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರಿನಿಂದಾಗಿ ಡೋಮಿನಾಸ್ ಫಿಜ್ಜಾ ಸಂಸ್ಥೆ ಇವರಿಗೆ ಬರೋಬ್ಬರಿ 60 ವರ್ಷಗಳ ಉಚಿತವಾಗಿ ಪಿಜ್ಜಾ ನೀಡಲಿದೆ.
ಆಸ್ಟ್ರೇಲಿಯಾದಲ್ಲಿ ಡೊಮಿನೋಸ್ ಸಂಸ್ಥೆ ಇದೇ ತಿಂಗಳ 9ನೇ ತಾರೀಖಿನಂದು 60 ವರ್ಷಗಳನ್ನ ಪೂರೈಸಿದೆ. ಇದೇ ಸಂಭ್ರಮಕ್ಕೆ ಯಾವ ಪೋಷಕರು ತಮ್ಮ ಮಗುವಿಗೆ ಡೊಮಿನಿಕ್ ಎಂದು ನಾಮಕರಣ ಮಾಡುತ್ತಾರೋ ಅವರಿಗೆ 60 ವರ್ಷಗಳ ಕಾಲ ಪಿಜ್ಜಾ ಉಚಿತವಾಗಿ ನೀಡೋದಾಗಿ ಸಂಸ್ಥೆ ಘೋಷಣೆ ಮಾಡಿತ್ತು.
ಕ್ಲೆಮೆಂಟನ್ ದಂಪತಿ ಕೂಡ 9ನೇ ತಾರೀಖಿನಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಡಾಮಿನಿಕ್ ಎಂದು ಹೆಸರಿಡುವ ಮೂಲಕ ಜೀವಮಾನವಿಡೀ ಪಿಜ್ಜಾ ಉಚಿತವಾಗಿ ಪಡೆಯಲಿದ್ದಾರೆ.
https://www.instagram.com/p/CIeVYvxCjGO/?utm_source=ig_web_copy_link