ಭಾರತೀಯ ಮೂಲದ ದೀಪಕ್ ಲಾಲ್ ಎಂಬ ಹೆಸರಿನ ವ್ಯಕ್ತಿ ತಾವು ವರ್ಷಪೂರ್ತಿ ದುಡಿದು ಕೂಡಿಟ್ಟ ಹಣದಲ್ಲಿ ಭರ್ಜರಿ ಮನೆಯೊಂದನ್ನ ಕಟ್ಟಿಸಿದ್ದರು. ಆದರೆ ಇದೀಗ ಈ ಮನೆ ಕಟ್ಟಿಸಿದ ತಪ್ಪಿಗೆ ಬರೋಬ್ಬರಿ 1 ಕೋಟಿ ರೂಪಾಯಿ ದಂಡ ಕಟ್ಟುವಂತಾಗಿದೆ..!
ಮನೆ ಕಟ್ಟಿಸುವಾಗ ಬಿಲ್ಡರ್ ಮಾಡಿದ ಅಚಾತುರ್ಯದಿಂದಾಗಿ ಇದೀಗ ದೀಪಕ್ ಲಾಲ್ ಭಾರೀ ಮೊತ್ತದ ದಂಡ ತೆರುವಂತಾಗಿದೆ.
ಕಳೆದ ವರ್ಷ ದೀಪಕ್ ಲಾಲ್ ಪಾಪಕುರಾ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಲಿಕ್ಕಾಗಿ ಪಿನಾಕಲ್ ಹೋಮ್ಸ್ ಎಂಬ ಕಂಪನಿಯನ್ನ ಸಂಪರ್ಕಿಸಿದ್ದರು. 2020ರಲ್ಲೇ ಈ ಮನೆ ನಿರ್ಮಾಣ ಕಾರ್ಯ ಅರ್ಧದಷ್ಟು ಮುಗಿದಿತ್ತು. ಇನ್ನೇನು ಈ ಮನೆ ಸಂಪೂರ್ಣವಾಗಿ ತಯಾರಾಯ್ತು ಅನ್ನೋವಷ್ಟರಲ್ಲಿ ಅಚಾತುರ್ಯವೊಂದು ಬೆಳಕಿಗೆ ಬಂದಿದೆ.
ಸೋಫಾ ಮಾರಿದ್ದ ಮಹಿಳೆಗೆ ಬಳಿಕ ಕಾದಿತ್ತು ಭರ್ಜರಿ ಶಾಕ್...!
ಮನೆಯನ್ನ ಕಟ್ಟುವ ಭರದಲ್ಲಿ ಬಿಲ್ಡರ್ ಮನೆಯ ಮೂರು ಮಲಗುವ ಕೋಣೆಗಳನ್ನ ಪಕ್ಕದ ಮನೆಯ ಜಾಗದಲ್ಲಿ ಕಟ್ಟಿದ್ದಾರೆ. ಇದೊಂದು ಸಿ 94 ಡೆವಲಪ್ಮೆಂಟ್ ಎಂಬ ಕಂಪನಿಗೆ ಸೇರಿದ್ದು ಒಂದೋ ಮೂರು ಕೊಠಡಿಗಳನ್ನ ನೆಲಸಮ ಮಾಡಿ ಇಲ್ಲವೇ ಹಣ ಪಾವತಿ ಮಾಡಿ ಎಂದು ಹೇಳಿದೆ. ಬಿಲ್ಡರ್ನ ಈ ಎಡವಟ್ಟಿನಿಂದಾಗಿ ದೀಪಕ್ ಲಾಲ್ ಭಾರೀ ಮೊತ್ತದ ದಂಡ ತೆರುವಂತಾಗಿದೆ.