alex Certify ಶ್ವಾನಗಳ ವರ್ತನೆ ಕುರಿತು ಅಧ್ಯಯನದಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನಗಳ ವರ್ತನೆ ಕುರಿತು ಅಧ್ಯಯನದಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಶ್ವಾನಗಳು ಮನೇಲಿ ಇದ್ದರೆ ಮನರಂಜನೆಗೆ ಕೊರತೆ ಇಲ್ಲ ಅನ್ನೋ ಮಾತಂತೂ ಸುಳ್ಳಲ್ಲ. ಆದರೆ ಹೊಸ ಅಧ್ಯಯನವೊಂದರಲ್ಲಿ ಸಾಕು ನಾಯಿಗಳು ತಮ್ಮ ಮಾಲೀಕರ ಗಮನ ಸೆಳೆಯಲೆಂದೇ ಪರಸ್ಪರ ಆಟವಾಡುತ್ತವೆ ಎಂವ ಕುತುಹಲಕಾರಿ ಅಂಶ ಬೆಳಕಿಗೆ ಬಂದಿದೆ.

ಸಾಕು ನಾಯಿಗಳು ತಮ್ಮ ಮಾಲೀಕನ ಆಸಕ್ತಿಗೆ ತಕ್ಕಂತೆ ಹೊಂದಿಕೊಂಡು ಇರ್ತವೆ ಎಂದು ಪ್ರಾಣಿಗಳ ನಡವಳಿಕೆ ತಜ್ಞ ಹಾಗೂ ಲೇಖಕ ಲಿಂಡ್ಸೆ ಮೆಹರ್ಕಾಮ್​ ಹೇಳಿದ್ದಾರೆ.

10 ಜೋಡಿ ಸಾಕು ನಾಯಿಗಳನ್ನ 6 ತಿಂಗಳುಗಳ ಕಾಲ ಅಧ್ಯಯನದಲ್ಲಿಟ್ಟು ಈ ಫಲಿತಾಂಶವನ್ನ ಪಡೆಯಲಾಗಿದೆ. ಜೋಡಿ ಸಾಕು ನಾಯಿಗಳನ್ನ ಸಾಕುತ್ತಿರುವ ಮಾಲೀಕರು ನಾಯಿಗಳು ದಿನಕ್ಕೆ ಒಮ್ಮೆಯಾದರೂ ಪರಸ್ಪರ ಆಟವಾಡಿಕೊಳ್ತವೆ ಎಂದು ಮಾಹಿತಿ ನೀಡಿದ್ದಾರೆ.

ಮಾಲೀಕರು ಮನೆಯಲ್ಲಿ ಇಲ್ಲದೇ ಇದ್ದಾಗ, ಮಾಲೀಕರು ಮನೆಯಲ್ಲೇ ಇದ್ದರೂ ಪ್ರಾಣಿಗಳನ್ನ ನಿರ್ಲಕ್ಷ್ಯ ಮಾಡಿದ್ದಾಗ ಹಾಗೂ ಮಾಲೀಕರು ನಾಯಿಗಳನ್ನ ಗಮನಿಸುತ್ತಾ ಇದ್ದಾಗ ಅವುಗಳ ವರ್ತನೆಯನ್ನ ಸಂಶೋಧಕರು ಚಿತ್ರೀಕರಿಸಿದ್ದಾರೆ.

ಒಬ್ಬ ವ್ಯಕ್ತಿ ತಮ್ಮನ್ನ ವೀಕ್ಷಿಸುತ್ತಿದ್ದಾರೆ ಎಂಬ ವಿಚಾರ ನಾಯಿಗಳ ಗಮನಕ್ಕೆ ಬಂದರೆ ಅವು ಹೆಚ್ಚೆಚ್ಚು ಆಟವಾಡುತ್ತವೆ ಎಂದು ಅಧ್ಯಯನ ತಿಳಿಸಿದೆ. ಮಾಲೀಕರಿಂದ ಏನಾದರೂ ಸಿಗಬಹುದು ಎಂಬ ಕಾರಣಕ್ಕೆ ಇಲ್ಲವೇ ಮನೆಯಿಂದ ಹೊರಗೆ ಕರೆದುಕೊಂಡು ಹೋಗಬಹುದು ಅಥವಾ ಮಾಲೀಕರಿಗೆ ಸುರಕ್ಷತೆಯ ಭಾವವನ್ನ ನೀಡಲು ಈ ರೀತಿ ಮಾಡುತ್ತವೆ ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...