alex Certify ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಲು ಕಾರಣವಾಯ್ತು ಲೈಂಗಿಕ ವ್ಯಸನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಲು ಕಾರಣವಾಯ್ತು ಲೈಂಗಿಕ ವ್ಯಸನ….!

ಅಮೆರಿಕಾದ ಅಂಟ್ಲಾಂಟಾ ಪ್ರದೇಶದ ಸ್ಪಾ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದರು. 21 ವರ್ಷದ ರಾಬರ್ಟ್ ಆರನ್ ಲಾಂಗ್ ಹೆಸರಿನ ಹುಡುಗ ಗುಂಡಿನ ದಾಳಿ ನಡೆಸಿದ್ದ. ವಿಚಾರಣೆ ವೇಳೆ ದಾಳಿಗೆ ಕಾರಣ ಗೊತ್ತಾಗಿದೆ. ದಾಳಿಗೆ ಯಾವುದೇ ನಿಶ್ಚಿತ ಕಾರಣವಿರಲಿಲ್ಲವಂತೆ. ಲೈಂಗಿಕ ವ್ಯಸನಕ್ಕೆ ಬಿದ್ದಿದ್ದ ಯುವಕ ಅದೇ ಕಾರಣಕ್ಕೆ ಗುಂಡು ಹಾರಿಸಿದ್ದನಂತೆ.

ರಾಬರ್ಟ್ ಗೆ ಪದೇ ಪದೇ ಸ್ಪಾಗೆ ಹೋಗುವ ಆಸೆಯಾಗ್ತಿತ್ತು. ಅಲ್ಲಿಗೆ ಹೋದಾಗ ಆತನಿಗೆ ಸೆಕ್ಸ್ ಹಾರ್ಮೋನುಗಳು ಸಕ್ರಿಯವಾಗ್ತಿದ್ದವು. ಇದೇ ಕಾರಣಕ್ಕೆ ಸ್ಪಾ ಬಂದ್ ಮಾಡಲು ಬಯಸಿದ್ದ. ಸ್ಪಾದಲ್ಲಿ ಕೆಲಸ ಮಾಡ್ತಿದ್ದ ಕೆಲ ಏಷ್ಯಾ ಮೂಲದ ಮಹಿಳೆಯರು ಸಾವನ್ನಪ್ಪಿದ್ದರು. ಹಾಗಾಗಿ ಇದನ್ನು ನಕ್ಸಲರ ದಾಳಿ ಎಂದು ನಂಬಲಾಗಿತ್ತು.

ONLINE ತರಗತಿಯನ್ನು 25 ವರ್ಷಗಳ ಹಿಂದೆಯೇ ಅಂದಾಜಿಸಿತ್ತಾ ಈ ಕಾಮಿಕ್ ಸೀರೀಸ್…? ಕುತೂಹಲ ಮೂಡಿಸಿದೆ ಫೋಟೋ

ಸೆಕ್ಸ್ ವಿಚಾರಕ್ಕೆ ದೊಡ್ಡ ಅಪರಾಧ ನಡೆದ ಘಟನೆ ಅಮೆರಿಕಾದಲ್ಲಿ ಇದೇ ಮೊದಲಲ್ಲ. ಹಾಲಿವುಡ್ ನಿರ್ದೇಶಕ ಹಾರ್ವೆ ವೆನ್ಸ್ಟೈನ್, ಸರಣಿ ಕೊಲೆಗಾರ ಟೆಡ್ ಬಂಡಿ ಮತ್ತು ಮೂವರು ಬಾಲಕಿಯರ ಅಪಹರಣದ ನಂತರ ಸೆರೆಯಲ್ಲಿಟ್ಟುಕೊಂಡಿದ್ದ ಏರಿಯಲ್ ಕ್ಯಾಸ್ಟ್ರೊ ಕೂಡ ಸೆಕ್ಸ್ ಚಟಕ್ಕೆ ಬಲಿಯಾಗಿ ಹೀಗೆ ಮಾಡಿರುವುದಾಗಿ ಹೇಳಿದ್ದರು. ಆದ್ರೆ ಇದ್ರ ಬಗ್ಗೆ ಅಧ್ಯಯನ ನಡೆಸಿರುವ ತಜ್ಞರು ಸೆಕ್ಸ್ ಚಟ ಹಾಗೂ ಅಪರಾಧಕ್ಕೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...