alex Certify ಕೊನೆಗೂ ʼಹಾರುವ ತಟ್ಟೆʼಯ ಗುಟ್ಟು ಬಿಚ್ಚಿಟ್ಟ ಅಮೆರಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ ʼಹಾರುವ ತಟ್ಟೆʼಯ ಗುಟ್ಟು ಬಿಚ್ಚಿಟ್ಟ ಅಮೆರಿಕಾ

ನ್ಯೂಯಾರ್ಕ್‌: ಅಮೆರಿಕಾದ ನೌಕಾ ಪಡೆ ಪೈಲಟ್ ಗಳಿಗೆ ಕಂಡ ಹಾರುವ ವಸ್ತುಗಳು ಯಾವವು ಎಂಬುದು ಇನ್ನೂ ಪತ್ತೆಯಾಗಿಲ್ಲ. ಇಂಜಿನ್ ಅಥವಾ ಹೊಗೆ ಹೊರ ಹಾಕುವ ವ್ಯವಸ್ಥೆ ಇಲ್ಲದ ವಸ್ತುಗಳನ್ನು ಪೈಲಟ್ ಗಳು ತಮ್ಮ ತರಬೇತಿ ಹಾರಾಟದ ವೇಳೆ 2004, 2015 ಹಾಗೂ‌2017 ರಲ್ಲಿ ಕಂಡಿದ್ದರು. ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದ್ದವು.

ಇವು ಅನ್ಯ ಗ್ರಹದ ಹಾರುವ ತಟ್ಟೆಗಳಲ್ಲ. ಹವಾಮಾನದ ಪರಿಣಾಮದಿಂದ ಉಂಟಾಗಿದ್ದು, ವಿಮಾನದ ಮೇಲೆ ಬಿದ್ದ ಬೆಳಕಿನ ಪ್ರತಿಫಲನವೂ ಆಗಿರಬಹುದು ಎಂದು ಹೇಳಿದ್ದರು. ಈಗ ಅಮೆರಿಕಾ ರಕ್ಷಣಾ ಇಲಾಖೆ ಇವುಗಳ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ.

ಈ ಕುರಿತು ತನಿಖೆ ನಡೆದಿದ್ದು, ಇದು ಯಾವುದೇ ಷಡ್ಯಂತ್ರವಲ್ಲ. ಜನರಿಗೆ ಗೊಂದಲ ಉಂಟಾಗದಿರಲಿ ಎಂದು ವಿಡಿಯೋ ಹರಿ ಬಿಡಲಾಗಿದೆ. ಆದರೆ, ವಸ್ತುಗಳು ಯಾವವು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ ಎಂದು ಪೆಂಟಗನ್ ನಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...