alex Certify ಪುರುಷರಿಗೇಕೆ ನೀಡಲಾಗ್ತಿದೆ ಮಹಿಳೆಯರ ಸೆಕ್ಸ್ ಹಾರ್ಮೋನ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರಿಗೇಕೆ ನೀಡಲಾಗ್ತಿದೆ ಮಹಿಳೆಯರ ಸೆಕ್ಸ್ ಹಾರ್ಮೋನ್…?

ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಈ ಸೋಂಕಿಗೆ ಸಾವನ್ನಪ್ಪುತ್ತಿದ್ದಾರೆ. ಚೀನಾ ಸಂಶೋಧಕರ ಪ್ರಕಾರ ಶೇಕಡಾ 2.8 ರಷ್ಟು ಪುರುಷರು ಕೊರೊನಾಗೆ ಸಾವನ್ನಪ್ಪಿದ್ರೆ ಮಹಿಳೆಯರ ಸಂಖ್ಯೆ ಶೇಕಡಾ 1.7 ರಷ್ಟಿದೆ.

ಚೀನಾ ಸಂಶೋಧಕರು 44,600 ರೋಗಿಗಳ ಮೇಲೆ ಈ ಅಧ್ಯಯನ ನಡೆಸಿದ್ದಾರೆ. ಮಹಿಳೆಯರಲ್ಲಿ ಕಂಡುಬರುವ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟ್ರಾನ್ ಎಂಬ ಲೈಂಗಿಕ ಹಾರ್ಮೋನುಗಳಿಂದಾಗಿ ಅವರು ವೈರಸ್‌ನಿಂದ ಸ್ವಲ್ಪ ಸುರಕ್ಷಿತವಾಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯುತ್ತಿದೆ.

ಮಹಿಳೆಯರು ಅನುವಂಶಿಕ ರಚನೆ ಇದಕ್ಕೆ ಕಾರಣವೆನ್ನಲಾಗ್ತಿದೆ. ರೋಗಗಳ ವಿರುದ್ಧ ಹೋರಾಡುವಲ್ಲಿ ಪುರುಷರಿಗಿಂತ ಮಹಿಳೆಯರ ರೋಗ ನಿರೋಧಕ ಶಕ್ತಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಸಿದ್ಧಾಂತದ ಜೊತೆಗೆ ವಿಜ್ಞಾನಿಗಳು ಈಗ ಲೈಂಗಿಕ ಹಾರ್ಮೋನುಗಳನ್ನೂ ಅಧ್ಯಯನ ಮಾಡುತ್ತಿದ್ದಾರೆ. ನ್ಯೂಯಾರ್ಕ್ ನ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯವು ಕೊರೊನಾದ ಕೆಲವು ಪುರುಷ ರೋಗಿಗಳಿಗೆ ಮಹಿಳೆಯರಲ್ಲಿ ಕಂಡುಬರುವ ಈಸ್ಟ್ರೊಜೆನ್ ಹಾರ್ಮೋನುಗಳೊಂದಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...