ಕೊರೊನಾ ವೈರಸ್ ಕಾರಣ, ಆಗಿರುವ ಬಹಳಷ್ಟು ಅನಾನುಕೂಲಗಳಲ್ಲಿ ಕಾಯಿನ್ ಗಳ ಕೊರತೆಯೂ ಒಂದಾಗಿದೆ. ಚಿಲ್ಲರೆ ಮಾರಾಟಗಾರರಿಗೆ ಈ ಕಾರಣ ಬಹಳ ತೊಂದರೆಯಾಗಿಬಿಟ್ಟಿದೆ.
ಉತ್ತರ ಕರೋಲಿನಾದ ಪೈನ್ ನೋಲ್ ಶೋರ‍್ಸ್ ಎಂಬಲ್ಲಿರುವ ಅಕ್ವೇರಿಯಮ್ ಒಂದಕ್ಕೂ ಸಹ ಇಂಥದ್ದೇ ಸಮಸ್ಯೆ ಎದುರಾಗಿದೆ. ಐದು ತಿಂಗಳ ಕಾಲ ಲಾಕ್ ಡೌನ್ ಆಗಿರುವುದರಿಂದ ಈ ಅಕ್ವೇರಿಯಮ್‌ನ ಸಿಬ್ಬಂದಿ, ಒಳಗಿರುವ ನೀರನ್ನು ಪೂರ್ತಿಯಾಗಿ ಹೊರಹಾಕಿ, ವೀಕ್ಷಕರು ಎಸೆದಿರುವ ಚಿಲ್ಲರೆ ನಾಣ್ಯಗಳನ್ನು ಸಂಗ್ರಹಿಸಿಕೊಂಡು, ಅದರಿಂದ ತನ್ನ ಬಿಲ್‌ಗಳನ್ನು ಪಾವತಿ ಮಾಡಲು ಮುಂದಾಗಿದೆ.
ಈ ಕಾಯಿನ್‌ಗಳನ್ನು ಕ್ಲೀನ್ ಮಾಡಿಕೊಂಡು, ಅಕ್ವೇರಿಯಮ್‌ನಲ್ಲಿರುವ ಜೀವಿಗಳಿಗೆ ಆರೈಕೆ ಮಾಡಲು ಬಳಕೆ ಮಾಡಲಾಗುತ್ತದೆ ಎಂದು ಎನ್.ಸಿ. ಅಕ್ವೇರಿಯಮ್ ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಬರೆದುಕೊಂಡಿದೆ.
https://www.facebook.com/NCaquariumPKS/posts/10157805291194067