ಫಿಟ್ನೆಸ್ ಕಾಪಾಡಬೇಕು ಅಂತಾ ಹಾಕಿಕೊಳ್ಳೋ ಫಿಟ್ನೆಸ್ ಬ್ಯಾಂಡ್ ಒಂದು 61 ವರ್ಷದ ವ್ಯಕ್ತಿಯ ಜೀವವನ್ನ ಉಳಿಸಿದ ಅಪರೂಪ ಘಟನೆ ಬೆಳಕಿಗೆ ಬಂದಿದೆ
ನಿವೃತ್ತ ಉದ್ಯೋಗಿ ಇಂದೋರ್ ನಿವಾಸಿ ಆರ್. ರಾಝನ್ಸ್ ತಮ್ಮ ಪುತ್ರ ಉಡುಗೊರೆಯಾಗಿ ನೀಡಿದ್ದ ಆಪಲ್ ಕಂಪನಿಯ ವಾಚ್ನ್ನ ಬಳಕೆ ಮಾಡ್ತಾ ಇದ್ದರು. ಒಂದು ದಿನ ವಾಚ್ನಲ್ಲಿ ಇಸಿಜಿ ಚೆಕ್ ಮಾಡಿ ರಾಝಾನ್ಸ್ ವಾಚ್ ತೋರಿಸಿದ ಮಾಹಿತಿ ಆಧರಿಸಿ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೂಡಲೇ ರಾಜನ್ಸ್ಗೆ ಆಸ್ಪತ್ರೆ ವೈದ್ಯಾಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಿ ಅವರನ್ನ ಪ್ರಾಣಾಪಾಯದಿಂದ ಕಾಪಾಡಿದ್ದಾರೆ . ಈ ಮಾಹಿತಿ ತಿಳಿದ ಆಪಲ್ ಕಂಪನಿ ಸಿಇಒ ಟಿಮ್ ಕುಕ್ ಆದಷ್ಟು ಬೇಗ ಗುಣಮುಖರಾಗಿ ಅಂತಾ ರಾಝನ್ಸ್ಗೆ ಶುಭ ಹಾರೈಸಿದ್ದಾರೆ.