alex Certify ಹೈಸ್ಕೂಲು ಮುಗಿಸಿದ 18 ವರ್ಷಗಳ ಬಳಿಕ ಕಾಲೇಜು ಮೆಟ್ಟಿಲೇರಿದ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಸ್ಕೂಲು ಮುಗಿಸಿದ 18 ವರ್ಷಗಳ ಬಳಿಕ ಕಾಲೇಜು ಮೆಟ್ಟಿಲೇರಿದ….!

“ವಯಸ್ಸು ಒಂದು ಸಂಖ್ಯೆ ಅಷ್ಟೇ” ಎಂಬ ಮಾತನ್ನು ಅಕ್ಷರಶಃ ನಿಜವಾಗಿಸುವ ಅನೇಕ ನಿದರ್ಶನಗಳನ್ನು ಆಗಾಗ ನೋಡುತ್ತಲೇ ಇರುತ್ತೇವೆ. ಅದು ಪ್ರೇಮವೇ ಆಗಲೀ ಶಿಕ್ಷಣವೇ ಆಗಲೀ, ಸಾಧಿಸುವ ಛಲವೊಂದಿದ್ದರೆ ಯಾವ ವಯಸ್ಸಿನಲ್ಲಾದರೂ ಜಯಿಸಬಹುದು ಎಂದು ತಿಳಿದಿದ್ದೇವೆ.

ಇಂಥದ್ದೇ ಮತ್ತೊಂದು ನಿದರ್ಶನದಲ್ಲಿ, ಸ್ಕೂಲಿಂಗ್ ಮುಗಿದು 18 ವರ್ಷಗಳ ಬಳಿಕ ಕಾಲೇಜು ಮೆಟ್ಟಿಲೇರಲು 36 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ. ರೆಡ್ಡಿಟ್‌ನಲ್ಲಿ ಕಾಲೇಜಿನಲ್ಲಿ ತಮ್ಮ ಮೊದಲ ದಿನವನ್ನು ಕಳೆದ ಫೋಟೋವೊಂದನ್ನು ಪೋಸ್ಟ್ ಮಾಡಿಕೊಂಡಿರುವ ಕ್ರಿಸ್ಟೋಫರ್‌, “Christopher’s first day of college. I am 36 years old,” ಎಂಬ ಬೋರ್ಡ್ ‌ಅನ್ನು ಹಿಡಿದು ನಿಂತಿದ್ದಾರೆ.

“ಏನು ಬೇಕಾದರೂ ಸಾಧಿಸಬಹುದು ಎಂದು ನನ್ನ ಮಗಳಿಗೆ ತೋರಿಸಲು ನಾನು ಹೈಸ್ಕೂಲ್‌ ಮುಗಿಸಿ 18 ವರ್ಷಗಳ ಬಳಿಕ ಕಾಲೇಜಿನ ಮೆಟ್ಟಿಲೇರುತ್ತಿದ್ದೇನೆ” ಎಂದು ಹೇಳಿದ್ದಾರೆ ಕ್ರಿಸ್ಟೋಫರ್‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...