alex Certify ಮಗನೊಂದಿಗಿನ ಪಂದ್ಯದಲ್ಲಿ ಸೋತ ತಂದೆ ಗುಂಡು ಹಾರಿಸಿದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನೊಂದಿಗಿನ ಪಂದ್ಯದಲ್ಲಿ ಸೋತ ತಂದೆ ಗುಂಡು ಹಾರಿಸಿದ…!

ನೋಡಿ ಒಮ್ಮೊಮ್ಮೆ ತಮಾಷೆ ಮಾಡಲು ಹೋಗಿ ಏನೇನು ಅನಾಹುತವಾಗುತ್ತದೆ ಎಂದು. ಇಲ್ಲೊಬ್ಬ ಅಪ್ಪ 2 ಪೆಗ್ ಹಾಕಿದ್ದೇ ಹಾಕಿದ್ದು ಮಗನನ್ನು ಕರೆದು ತೋಳ್ಬಲದಲ್ಲಿ ಯಾರು ಮೇಲು ಎಂಬುದನ್ನು ನೋಡೇಬಿಡೋಣ ಎಂದು ಹೋಗಿ ಕೊನೆಗೆ ಶೂಟ್ ಮಾಡಿಬಿಟ್ಟಿದ್ದಾನೆ..!

ಅಮೆರಿಕದ ಬೌನ್ ಕೌಂಟಿಯ 55 ವರ್ಷದ ಕರ್ಟೀಸ್ ಜಿಮ್ಮರ್ ಮ್ಯಾನ್ ಎಂಬಾತ ಮನೆಯಲ್ಲಿ ಕುಡಿದುಕೊಂಡು ಮಗನ ಬಳಿ ಪಂದ್ಯಕ್ಕೆ ಹೋಗಿದ್ದಾನೆ. ಆರ್ಮ್ ವ್ರೆಸ್ಟ್ಲಿಂಗ್ (ತೋಳ್ಬಲ) ನಲ್ಲಿ ಯಾರು ಗಟ್ಟಿಗರು ಎಂಬುದನ್ನು ಸಾಬೀತು ಮಾಡಬೇಕೆಂದು ಹೋಗಿ ಎಲ್ಲ ಬಾರಿಯೂ ತಾನೇ ಸೋತು ಹತಾಶನಾಗಿದ್ದಾನೆ. ಇದರಿಂದ ಕೋಪಗೊಂಡು ಮನೆಯ ಸೀಲಿಂಗ್ ಗೆ 2 ಬಾರಿ ಗುಂಡುಹಾರಿಸಿದ್ದಾನೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕರ್ಟೀಸ್ ಗೆ ಹೊರಬರುವಂತೆ ಕೇಳಿದರೆ, ಏನು ಮಾಡಿದರೂ ಆತ ಒಪ್ಪಲೇ ಇಲ್ಲ. ಹೀಗಾಗಿ ಮನೆಯ ಹೊರಗೇ ಪೊಲೀಸರು ಬರೋಬ್ಬರಿ 8 ಗಂಟೆಗಳ ಕಾಲ ನಿಲ್ಲಬೇಕಾಯಿತು ಎಂಬ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಿಬ್ಬಂದಿ ಬರೆದುಕೊಂಡಿದ್ದಾರೆ. ಕೊನೆಗೆ ಯಾವುದೇ ಸಮಸ್ಯೆ ಮಾಡದೆ ಶರಣಾಗತನಾದ ಎಂದೂ ಪೊಲೀಸರು ತಿಳಿಸಿದ್ದಾರೆ.

On Monday, July 6, 2020, at approximately 12:58 AM, Boone County Sheriff’s Office deputies were dispatched to 850…

Posted by Boone County Sheriff's Office, KY on Monday, July 6, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...