alex Certify ಕಡಿಮೆ ಬೆಲೆಯ ವೆಂಟಿಲೇಟರ್ ತಯಾರಿಸಿದ ಅಫ್ಘಾನ್‌ ಹುಡುಗಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ಬೆಲೆಯ ವೆಂಟಿಲೇಟರ್ ತಯಾರಿಸಿದ ಅಫ್ಘಾನ್‌ ಹುಡುಗಿಯರು

All-girl Afghan robotic team builds cheap ventilatorsಅಫ್ಘಾನ್: ರೋಗಿಗಳಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡುವ ವೈದ್ಯಕೀಯ ಉಪಕರಣ ವೆಂಟಿಲೇಟರ್ ಗೆ ಕರೋನಾ ಕಾಲದಲ್ಲಿ ಭಾರಿ ಬೇಡಿಕೆ ಬಂದಿದೆ.

“ಅಫ್ಘಾನ್ ಡ್ರೀಮರ್ಸ್” ಎಂಬ 6 ಜನ ಹುಡುಗಿಯರ ತಂಡ ಕಡಿಮೆ ವೆಚ್ಚದಲ್ಲಿ ವೆಂಟಿಲೇಟರ್ ಗಳ ತಯಾರಿಕೆಯನ್ನು ಕಂಡು ಹಿಡಿದಿದೆ.

ಯು.ಎಸ್. ಮಾರ್ಕೆಟ್ ನಲ್ಲಿ ಒಂದು ವೆಂಟಿಲೇಟರ್ ಬೆಲೆ 30 ಸಾವಿರ ಡಾಲರ್ ನಿಂದ 40 ಸಾವಿರ ಡಾಲರ್ ಇದ್ದು, ಈ ತಂಡ ಕೇವಲ 300 ಡಾಲರ್ ಗೆ ವೆಂಟಿಲೇಟರ್ ಗಳನ್ನು ತಯಾರಿಸಬಹುದು ಎಂದಿದೆ.

ಇದೆ 6 ಜನರ ತಂಡ ಯು.ಎಸ್. ನಲ್ಲಿ 2017 ರಲ್ಲಿ ನಡೆದ ಮೊದಲ “ಗ್ಲೋಬಲ್ ಚಾಲೆಂಜ್” ರೊಬೋಟಿಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ವಿಶ್ವದ ಗಮನ ಸೆಳೆದಿತ್ತು. ಅಫ್ಘಾನ್ ನ ಪಶ್ಚಿಮ ಭಾಗದ ಹೆರಾತ್ ನಿವಾಸಿಗಳಾದ ಈ ಹುಡುಗಿಯರು , ಕಾರಿನ ಭಾಗಗಳನ್ನು ಉಪಯೋಗಿಸಿಕೊಂಡು ಕಡಿಮೆ ವೆಚ್ಚದಲ್ಲಿ ವೆಂಟಿಲೇಟರ್ ಗಳನ್ನು ತಯಾರಿಸಿದ್ದಾರೆ.

ಹೆರಾತ್ ನ ವೈದ್ಯಕೀಯ ಸಂಸ್ಥೆಯಲ್ಲಿ ಕೇವಲ 4 ಹಳೆಯ ವೆಂಟಿಲೇಟರ್ ಗಳಿದ್ದು, ಅವುಗಳಿಂದಲೇ ಚಿಕಿತ್ಸೆ ಮಾಡುವ ಅನಿವಾರ್ಯತೆ ಇತ್ತು. ಕಾಬೂಲ್ ನಂತರ ಈ ಪ್ರದೇಶದಲ್ಲಿ ಹೆಚ್ಚಿನ ಕರೋನಾ ರೋಗಿಗಳಿದ್ದು, ಅವರ ಚಿಕಿತ್ಸೆಗೆ ಹೆಚ್ಚಿನ ವೆಂಟಿಲೇಟರ್ ಗಳ ಅವಶ್ಯಕತೆ ಇತ್ತು. ಇದೇ ತಮ್ಮ ಸಂಶೋಧನೆಗೆ ಸ್ಫೂರ್ತಿಯಾಗಿದೆ ಎನ್ನುತ್ತಾರೆ ಯುವತಿಯರು.

“ನಾವು ವೆಂಟಿಲೇಟರ್ ಗಳನ್ನು ಪರೀಕ್ಷಿಸಿದ್ದು ಅಫ್ಘಾನ್ ಪಬ್ಲಿಕ್ ಹೆಲ್ತ್ ಮಿನಿಸ್ಟ್ರಿ ಮತ್ತು ವರ್ಡ್ ಹೆಲ್ತ್ ಆರ್ಗನೈಸೇಶನ್ ಅವರ ಒಪ್ಪಿಗೆಯ ನಂತರವೇ ಕರೋನಾ ರೋಗಿಗಳಿಗೆ ಹೊಸ ವೆಂಟಿಲೇಟರ್ ಗಳನ್ನು ಉಪಯೋಗಿಸಿದ್ದೇವೆʼʼ ಎಂದು ದ ಹಾರ್ಟ್ ರೀಜನಲ್ ಆಸ್ಪತ್ರೆಯ ವೈದ್ಯರು, ತಿಳಿಸಿದ್ದಾರೆ.

“ಕರೋನಾದಿಂದಾಗಿ ಇಡೀ ಜಗತ್ತಿನಲ್ಲಿ ಆರೋಗ್ಯ ಸೌಲಭ್ಯಗಳ ಅವಶ್ಯಕತೆ ಹೆಚ್ಚಾಗಿದ್ದು, ನಮ್ಮ ಸಂಶೋಧನೆ ಇಂಥ ಸಂದರ್ಭದಲ್ಲಿ ನೆರವಾಗುತ್ತದೆ” ಎಂದು ತಂಡದ ನಾಯಕಿ 17 ವರ್ಷದ ಸುಮ್ಮಯಾ ಫರೂಕಿ ಹೇಳಿದ್ದಾರೆ. ನಾವು ತಯಾರಿಸಿದ ವೆಂಟಿಲೇಟರ್ ಗಳು 24 ಗಂಟೆ ಯಾವುದೇ ಅಡೆತಡೆ ಇಲ್ಲದೆ ಕಾರ್ಯ ನಿರ್ವಹಿಸುವ ಕ್ಷಮತೆ ಇರುವಂತಹವು ಎಂದು ತಂಡದ ಸದಸ್ಯೆ ಫ್ಲುರನ್ಸ್ ಪುಯ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...