alex Certify ವೆಂಟಿಲೇಟರ್ ನಲ್ಲಿದ್ದ ಪತಿ ಜೊತೆ 3 ಗಂಟೆ ಮಾತನಾಡಿದ ಪತ್ನಿ: ಆಮೇಲೆನಾಯ್ತು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೆಂಟಿಲೇಟರ್ ನಲ್ಲಿದ್ದ ಪತಿ ಜೊತೆ 3 ಗಂಟೆ ಮಾತನಾಡಿದ ಪತ್ನಿ: ಆಮೇಲೆನಾಯ್ತು…?

कोरोना: नवरा व्हेंटिलेटरवर होता, 3 ...

ಅಮೆರಿಕಾದಲ್ಲಿ ಕೊರೊನಾ ಸೋಂಕಿಗೆ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಚಮತ್ಕಾರವೊಂದು ನಡೆದಿದೆ. ವೃತ್ತಿಯಲ್ಲಿ ವಕೀಲರಾಗಿದ್ದು, ಅಥ್ಲೆಟ್ ಆಗಿಯೂ ಮಿಂಚಿದ್ದ ಜಿಮ್ ಬೆಲ್ಲೊ ಚಮತ್ಕಾರದಿಂದ ಚೇತರಿಸಿಕೊಂಡಿದ್ದಾರೆ.

ಆರಂಭದಲ್ಲಿ ಅವ್ರಿಗೆ ಕೊರೊನಾ ಲಕ್ಷಣವಿರಲಿಲ್ಲ. ನಂತ್ರ ಅವ್ರ ಆರೋಗ್ಯ ಹದಗೆಟ್ಟಿತ್ತು. 30 ದಿನಗಳ ಕಾಲ ವೆಂಟಿಲೇಟರ್ ನಲ್ಲಿಟ್ಟರು. ಶ್ವಾಸಕೋಶದಲ್ಲಿ ಸಮಸ್ಯೆಯಿದ್ದು ಬದುಕೋದು ಕಷ್ಟವೆಂದು ವೈದ್ಯರು ಹೇಳಿದ್ದರು. ಮೂರು ಮಕ್ಕಳ ತಂದೆಯಾಗಿರುವ 49 ವರ್ಷದ ಜಿಮ್ ಬೆಲ್ಲೊ ಪತ್ನಿಗೆ ವೈದ್ಯರು ಕರೆ ಮಾಡಿದ್ದರು.

30 ದಿನಗಳಲ್ಲಿ ಪತ್ನಿ ಎರಡನೇ ಬಾರಿ ಪತಿಯನ್ನು ಭೇಟಿಯಾಗಿದ್ದರು. ಜಿಮ್ ಬೆಲ್ಲೊ ಭೇಟಿಗೆ 10 ನಿಮಿಷ ಅವಕಾಶ ನೀಡಲಾಗಿತ್ತು. ಆದ್ರೆ ನಂತ್ರ 3 ಗಂಟೆ ನೀಡಲಾಯ್ತು. ಪತ್ನಿ ಒಂದೇ ಸಮನೆ ಅವ್ರಿಗೆ ಧೈರ್ಯ ತುಂಬುತ್ತಿದ್ದರು. ಜಿಮ್ ಬೆಲ್ಲೊ ಇಲ್ಲದೆ ಹೋದ್ರೆ ಏನೆಲ್ಲ ಕಷ್ಟ ಎಂಬುದನ್ನು ವಿವರಿಸಿದ್ದರು. ನೀನು ನಮಗೆ ಬೇಕು ಎಂದಿದ್ದರು.

ಅವ್ರ ಮಾತಿನಿಂದಲೋ ಅಥವಾ ಚಿಕಿತ್ಸೆಯಿಂದಲೋ ಗೊತ್ತಿಲ್ಲ, ಪತ್ನಿ ಭೇಟಿಯಾಗಿ ಮೂರು ದಿನಗಳಲ್ಲಿ  ಜಿಮ್ ಬೆಲ್ಲೊ ಚೇತರಿಸಿಕೊಂಡಿದ್ದಾರೆ. ಅವ್ರ ಆರೋಗ್ಯ ಸುಧಾರಿಸಿ ಏಪ್ರಿಲ್ 14ರಂದು ಮನೆಗೆ ತೆರಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...