alex Certify OMG: ವಿಶ್ವದಲ್ಲಿರುವ ʼಕೊರೊನಾʼ ವೈರಸ್‌ ಕೇವಲ ಒಂದು ಕೋಕಾಕೋಲಾ ಡಬ್ಬಿಯಲ್ಲಿ ತುಂಬುತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ವಿಶ್ವದಲ್ಲಿರುವ ʼಕೊರೊನಾʼ ವೈರಸ್‌ ಕೇವಲ ಒಂದು ಕೋಕಾಕೋಲಾ ಡಬ್ಬಿಯಲ್ಲಿ ತುಂಬುತ್ತೆ….!

ವಿಶ್ವಕ್ಕೆ ಸಂಕಷ್ಟವನ್ನ ತಂದೊಡ್ಡಿರುವ ಕೊರೊನಾ ವೈರಸ್ ಈಗಾಗಲೇ 107 ಮಿಲಿಯನ್‌ ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಹಾಗೂ ಇದರಲ್ಲಿ 2.3 ಮಿಲಿಯನ್​ ಜನರು ಸಾವಿಗೀಡಾಗಿದ್ದಾರೆ.

ಕೊರೊನಾ ಮೊದಲ ಕೇಸ್​​ನ್ನು ಪತ್ತೆ ಹಚ್ಚಿ ಒಂದು ವರ್ಷಗಳ ಮೇಲಾಗಿದೆ. ಆದರೆ ಇಂದಿಗೂ ಸಹ ಕೊರೊನಾ ವೈರಸ್​ನ್ನು ಸಂಪೂರ್ಣವಾಗಿ ನಾಶ ಮಾಡೋಕೆ ಸಾಧ್ಯವಾಗಿಲ್ಲ. ಆದರೆ ಈ ಸೋಂಕನ್ನ ಕಡಿಮೆ ಮಾಡಲು ಈಗಾಗಲೇ ನಾನಾ ಕ್ರಮಗಳನ್ನ ಅಳವಡಿಸಿಕೊಳ್ಳಲಾಗಿದೆ. ಈಗಂತು ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಕೊರೊನಾ ವಿರುದ್ಧ ಲಸಿಕೆ ಅಸ್ತ್ರವನ್ನ ಬಳಕೆ ಮಾಡುತ್ತಿವೆ.

ಕೊರೊನಾ ಅಂದರೆ ಲ್ಯಾಟಿನ್​ ಭಾಷೆಯಲ್ಲಿ ಕಿರೀಟ ಎಂದು ಅರ್ಥವನ್ನ ಹೊಂದಿದೆ. ಕೊರೊನಾ ವೈರಸ್​ನ ಸ್ಪೈಕ್​​ಗಳು ಕಿರೀಟದ ಆಕೃತಿಯನ್ನ ಹೊಂದಿರೋದ್ರಿಂದ ಈ ಹೆಸರನ್ನ ಇಡಲಾಗಿದೆ.

ಈಗಾಗಲೇ ಕೊರೊನಾ ವೈರಸ್ ನೋಡೋಕೆ ಹೇಗಿರುತ್ತೆ ಅನ್ನೋದಕ್ಕೆ ಸಾಕಷ್ಟು ಚಿತ್ರಗಳು ಇಂಟರ್ನೆಟ್​ನಲ್ಲಿ ಲಭ್ಯವಿದೆ. ಬ್ರಿಟಿಷ್​ ಗಣಿತಶಾಸ್ತ್ರಜ್ಞರೊಬ್ಬರ ಪ್ರಕಾರ, ಇಡೀ ವಿಶ್ವದಲ್ಲಿರುವ ಒಟ್ಟು ಕೊರೊನಾ ವೈರಸ್​​ನ್ನು ಒಂದು ಕೊಕೊ ಕೋಲಾ ಕ್ಯಾನ್​​ನಲ್ಲಿ ತುಂಬಿಡಬಹುದಂತೆ.

ಗಣಿತ ಶಾಸ್ತ್ರಜ್ಞ ಕಿಟ್​ ಯೇಟಸ್​ ಎಂಬವರು ಈ ಹೊಸ ಅನ್ವೇಷಣೆಯನ್ನ ಮಾಡಿದ್ದಾರೆ. ಸಂಶೋಧನೆಯ ವೇಳೆ ಪ್ರಪಂಚದಲ್ಲಿ ಸುಮಾರು 100 ಶತಕೋಟಿಗೂ ಹೆಚ್ಚು ವೈರಸ್​ ಇದೆ ಅನ್ನೋದನ್ನ ಲೆಕ್ಕ ಹಾಕಿದ್ದಾರೆ. ಪ್ರತಿಯೊಂದು ವೈರಸ್​ ಸುಮಾರು 100 ನ್ಯಾನೋಮೀಟರ್​ ವ್ಯಾಸ ಹೊಂದಿದೆ. ಈ ಲೆಕ್ಕಾಚಾರದ ಪ್ರಕಾರ ವಿಶ್ವದಲ್ಲಿರುವ ಎಲ್ಲಾ ಕೊರೊನಾ ವೈರಸ್​ಗಳನ್ನ 330 ಎಂಎಲ್​​ ಕೋಕೋ ಕೋಲಾ ಕ್ಯಾನ್​​ನಲ್ಲಿ ತುಂಬಿಡಬಹುದು ಎಂದು ಅಂದಾಜಿಸಿದ್ದಾರೆ.

Animation by @VickiGSP pic.twitter.com/ZQio5Colzq

— Kit Yates (@Kit_Yates_Maths) February 10, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...