ವಿಶ್ವಕ್ಕೆ ಸಂಕಷ್ಟವನ್ನ ತಂದೊಡ್ಡಿರುವ ಕೊರೊನಾ ವೈರಸ್ ಈಗಾಗಲೇ 107 ಮಿಲಿಯನ್ ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಹಾಗೂ ಇದರಲ್ಲಿ 2.3 ಮಿಲಿಯನ್ ಜನರು ಸಾವಿಗೀಡಾಗಿದ್ದಾರೆ.
ಕೊರೊನಾ ಮೊದಲ ಕೇಸ್ನ್ನು ಪತ್ತೆ ಹಚ್ಚಿ ಒಂದು ವರ್ಷಗಳ ಮೇಲಾಗಿದೆ. ಆದರೆ ಇಂದಿಗೂ ಸಹ ಕೊರೊನಾ ವೈರಸ್ನ್ನು ಸಂಪೂರ್ಣವಾಗಿ ನಾಶ ಮಾಡೋಕೆ ಸಾಧ್ಯವಾಗಿಲ್ಲ. ಆದರೆ ಈ ಸೋಂಕನ್ನ ಕಡಿಮೆ ಮಾಡಲು ಈಗಾಗಲೇ ನಾನಾ ಕ್ರಮಗಳನ್ನ ಅಳವಡಿಸಿಕೊಳ್ಳಲಾಗಿದೆ. ಈಗಂತು ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಕೊರೊನಾ ವಿರುದ್ಧ ಲಸಿಕೆ ಅಸ್ತ್ರವನ್ನ ಬಳಕೆ ಮಾಡುತ್ತಿವೆ.
ಕೊರೊನಾ ಅಂದರೆ ಲ್ಯಾಟಿನ್ ಭಾಷೆಯಲ್ಲಿ ಕಿರೀಟ ಎಂದು ಅರ್ಥವನ್ನ ಹೊಂದಿದೆ. ಕೊರೊನಾ ವೈರಸ್ನ ಸ್ಪೈಕ್ಗಳು ಕಿರೀಟದ ಆಕೃತಿಯನ್ನ ಹೊಂದಿರೋದ್ರಿಂದ ಈ ಹೆಸರನ್ನ ಇಡಲಾಗಿದೆ.
ಈಗಾಗಲೇ ಕೊರೊನಾ ವೈರಸ್ ನೋಡೋಕೆ ಹೇಗಿರುತ್ತೆ ಅನ್ನೋದಕ್ಕೆ ಸಾಕಷ್ಟು ಚಿತ್ರಗಳು ಇಂಟರ್ನೆಟ್ನಲ್ಲಿ ಲಭ್ಯವಿದೆ. ಬ್ರಿಟಿಷ್ ಗಣಿತಶಾಸ್ತ್ರಜ್ಞರೊಬ್ಬರ ಪ್ರಕಾರ, ಇಡೀ ವಿಶ್ವದಲ್ಲಿರುವ ಒಟ್ಟು ಕೊರೊನಾ ವೈರಸ್ನ್ನು ಒಂದು ಕೊಕೊ ಕೋಲಾ ಕ್ಯಾನ್ನಲ್ಲಿ ತುಂಬಿಡಬಹುದಂತೆ.
ಗಣಿತ ಶಾಸ್ತ್ರಜ್ಞ ಕಿಟ್ ಯೇಟಸ್ ಎಂಬವರು ಈ ಹೊಸ ಅನ್ವೇಷಣೆಯನ್ನ ಮಾಡಿದ್ದಾರೆ. ಸಂಶೋಧನೆಯ ವೇಳೆ ಪ್ರಪಂಚದಲ್ಲಿ ಸುಮಾರು 100 ಶತಕೋಟಿಗೂ ಹೆಚ್ಚು ವೈರಸ್ ಇದೆ ಅನ್ನೋದನ್ನ ಲೆಕ್ಕ ಹಾಕಿದ್ದಾರೆ. ಪ್ರತಿಯೊಂದು ವೈರಸ್ ಸುಮಾರು 100 ನ್ಯಾನೋಮೀಟರ್ ವ್ಯಾಸ ಹೊಂದಿದೆ. ಈ ಲೆಕ್ಕಾಚಾರದ ಪ್ರಕಾರ ವಿಶ್ವದಲ್ಲಿರುವ ಎಲ್ಲಾ ಕೊರೊನಾ ವೈರಸ್ಗಳನ್ನ 330 ಎಂಎಲ್ ಕೋಕೋ ಕೋಲಾ ಕ್ಯಾನ್ನಲ್ಲಿ ತುಂಬಿಡಬಹುದು ಎಂದು ಅಂದಾಜಿಸಿದ್ದಾರೆ.
https://twitter.com/i/status/1359430465476820993