ಕೋವಿಡ್-19 ಬಗ್ಗೆ ಎಲ್ಲೆಡೆ ಭಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವೈರಾಣುಗಳನ್ನು ನಿಯಂತ್ರಣಕ್ಕೆ ತರಲೆಂದು ಸಂಶೋಧನೆಗಳು ಜೋರಾಗಿ ನಡೆಯುತ್ತಿವೆ.
ಈ ವೈರಾಣುಗಳನ್ನು ಶಾಖ, ಆಲ್ಕೋಹಾಲ್ ಅಥವಾ ಕೈತೊಳೆದುಕೊಳ್ಳುವುದರ ಮೂಲಕ ನಾಶಪಡಿಸಬಹುದಾಗಿದೆ ಎಂದು ಜರ್ಮನಿಯ ಸಂಶೋಧಕರ ತಂಡವೊಂದು ಪತ್ತೆ ಮಾಡಿದೆ. ರೂರ್‌ನ ಬಾಕಮ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವೊಂದು ಈ ಕುರಿತು ಅಧ್ಯಯನ ನಡೆಸಿದ್ದು, ಸ್ಟೀಲ್, ಬೆಳ್ಳಿ, ತಾಮ್ರ ಹಾಗೂ ಮುಖದ ಮಾಸ್ಕ್‌ಗಳ ಮೇಲೆ ಕೋವಿಡ್ ವೈರಾಣುಗಳು ಎಷ್ಟು ಹೊತ್ತಿನ ಮಟ್ಟಿಗೆ ಜೀವಂತ ಇರಬಲ್ಲವು ಹಾಗೂ ಅವುಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆಂದು ಅಧ್ಯಯನದ ವೇಳೆ ಪರೀಕ್ಷಿಸಲಾಗಿದೆ.
30 ಪ್ರತಿಶತ ಆಲ್ಕೋಹಾಲ್ ಕಂಟೆಂಟ್‌ನಿಂದ 30 ಸೆಕೆಂಡ್‌ಗಳ ಕಾಲ ತೊಳೆದಲ್ಲಿ ವೈರಾಣುಗಳನ್ನು ನಿಷ್ಕ್ರಿಯಗೊಳಿಸಬಹುದಾಗಿದೆ ಎಂದು ಸಂಶೋಧಕರ ತಂಡ ತಿಳಿಸಿದೆ.
EPFO ಅಲರ್ಟ್…! ಪ್ರಧಾನ ಉದ್ಯೋಗದಾತರಿಗೆ ಎಲೆಕ್ಟ್ರಾನಿಕ್ ಸೌಲಭ್ಯ
30 ನಿಮಿಷಗಳ ಕಾಲ 56 ಡಿಗ್ರಿ ಶಾಖಕ್ಕೆ ತೆರೆದುಕೊಂಡಲ್ಲಿ ವೈರಾಣುಗಳು ಉಳಿಯಲಾರವು ಹಾಗೂ ಸೋಪು ಬಳಸಿ ಕೈತೊಳೆದುಕೊಳ್ಳುವುದರಿಂದಲೂ ಸಹ ವೈರಾಣುಗಳು ನಿಷ್ಕ್ರಿಯವಾಗಲಿವೆ ಎಂದು ಇದೇ ವೇಳೆ ತಿಳಿದುಬಂದಿದೆ.
“ಸಾಮಾನ್ಯವಾಗಿ ಬಳಸಲ್ಪಡುವ ಕ್ರಿಮಿನಾಶಕಗಳು ಕೋವಿಡ್‌ನ ಎಲ್ಲಾ ಅವತರಣಿಕೆಗಳ ವಿರುದ್ಧ ಪರಿಣಾಮಕಾರಿಯಾಗಬಲ್ಲವು” ಎಂದು ರೂರ್ ಬಾಕ್ ವಿವಿಯ ಸ್ಟೆಫಾಯ್ನ್ ಫಾಂಡೆರ್ ತಿಳಿಸಿದ್ದಾರೆ.